ಬಂಟ್ವಾಳ: ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 7.05 ಕೋಟಿ ರೂ ವೆಚ್ಚದ ನಾನಾ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮವನ್ನು ಬಂಟ್ವಾಳ ಶಾಸಕ ಉಳಿಪ್ಪಾಡಿಗುತ್ತು ರಾಜೇಶ್ ನಾಯ್ಕ್ ಅವರು ಸೋಮವಾರ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ಗ್ರಾಮದ ಅಭಿವೃದ್ಧಿ ಸರಕಾರದ ಮೂಲಮಂತ್ರವಾಗಿದ್ದು ಗ್ರಾಮದ ಜನರ ಬೇಡಿಕೆಯನ್ನು ಹಂತಹಂತವಾಗಿ ಈಡೇರಿಸುವುದಾಗಿ ತಿಳಿಸಿದರು. ಪ್ರದಾನ ಮಂತ್ರಿ ಮತ್ತು ಮುಖ್ಯಮಂತ್ರಿಯವರ ನಾಯಕತ್ವದ ಅಡಿಯಲ್ಲಿ ತಾಲೂಕಿನ ಅಭಿವೃದ್ಧಿಯಾಗಲಿದೆ ಎಂದವರು ಹೇಳಿದರು.
ಆಶೀರ್ಚನ ನೀಡಿದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ರಸ್ತೆ ಅಭಿವೃದ್ಧಿಯಾದರೆ ಗ್ರಾಮ ಅಭಿಯಾಗುತ್ತದೆ ಎಂದರು.
2.25 ಕೋಟಿ ವೆಚ್ಚದ ಪಳ್ಳದಕೋಡಿ, ಪದ್ಯಾಣ ರಸ್ತೆ, 60 ಲಕ್ಷ ರೂ ವೆಚ್ಚದಲ್ಲಿ ಅರಸಳಿಕೆ, ವಗೆನಾಡು ರಸ್ತೆ ಮರುಡಾಮರಿಕರಣ , 75 ಲಕ್ಷ ರೂ ವೆಚ್ಚದಲ್ಲಿ ಶ್ರೀ ಜಲದುರ್ಗಾಪರಮೇಶ್ವರೀ ದೇವಸ್ಥಾನ ಪಡ್ಪು,ಆನೆಕಲ್ಲು, ಬಳಿ ನದಿಗೆ ತಡೆಗೋಡೆ, 10 ಲಕ್ಷ ವೆಚ್ಚದಲ್ಲಿ ಪಾಲಿಗೆ, ನಲಿಕೆ ಕಾಲೋನಿ ರಸ್ತೆ,ಕಾಂಕ್ರೀಟಿಕರಣ, 15 ಲಕ್ಷ ರೂ ವೆಚ್ಚದಲ್ಲಿ ಚೆಲ್ಲಂಗಾರು ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ, 5,ಲಕ್ಷ ರೂ ವೆಚ್ಚದಲ್ಲಿ ಮಿತ್ತನಡ್ಕ ಶ್ರೀ ಮಲರಾಯಿ ದೈವಸ್ಥಾನದ ಮುಂಭಾಗದಲ್ಲಿ ಒಳಚರಂಡಿ ರಚನೆ ,5 ಲಕ್ಷ ರೂ ವೆಚ್ಚದಲ್ಲಿ ಒಡಿಯೂರು, ಬನಾರಿ ಸಂಪರ್ಕ ರಸ್ತೆ, 30 ಲಕ್ಷ ವೆಚ್ಚದಲ್ಲಿ ಪಾದೆಕಲ್ಲು ಪೆರ್ವೋಡಿ ಸಂಪರ್ಕ ರಸ್ತೆ, 10 ಲಕ್ಷ ವೆಚ್ಚದಲ್ಲಿ ವಗೆನಾಡು, ಪಂಬತ್ತಾಜೆ ರಸ್ತೆ, 5 ಲಕ್ಷ ವೆಚ್ಚದಲ್ಲಿ ದೇವಸ್ಯ, ಪಟ್ಲ, ಪರಂದರಮೂಲೆ ರಸ್ತೆ, 1.25 ಲಕ್ಷ ರೂ ವೆಚ್ಚದಲ್ಲಿ ಕುಡ್ಪಲ್ತಡ್ಕ ಹೈಮಾಸ್ಟ್ ದೀಪ, 1.25 ಲಕ್ಷ ರೂ ವೆಚ್ಚದಲ್ಲಿ ಬೆಂಗದಪಡ್ಪು ಹೈಮಾಸ್ಟ್ ದೀಪ ಉದ್ಘಾಟನೆ, 1.25 ಲಕ್ಷ ರೂ ವೆಚ್ಚದಲ್ಲಿ ಒಡಿಯೂರು,ಶ್ರೀ ಗುರುದೇವ್ ದತ್ತ ಸಂಸ್ಥಾನ ಹೈಮಾಸ್ಟ್, 1.25 ಲಕ್ಷ ರೂ ವೆಚ್ಚದಲ್ಲಿ ಶ್ರೀ ರಾಜರಾಜೇಶ್ವರೀ ಭಜನಾ ಮಂದಿರ,ಬೇಡಗುಡ್ಡೆ ರಸ್ತೆಯ ಉದ್ಘಾಟನೆ ಕಾರ್ಯಕ್ರಮ ನಡೆಸಲಾಯಿತು. 1 ಕೋಟಿ ವೆಚ್ಚದ ಕಮ್ಮಾಜೆಯಿಂದ ಶ್ರೀ ಗುರುದೇವಸಂಸ್ಥಾನ ಒಡಿಯೂರು ರಸ್ತೆ, 1 ಕೋಟಿ ವೆಚ್ಚದ ಬೇತ, ಮುಗುಳಿ ರಸ್ತೆ ಕಾಂಕ್ರೀಟಿಕರಣ, 30 ಲಕ್ಷ ವೆಚ್ಚದಲ್ಲಿ ಪದ್ಯಾಣ ಗಡಿಜಾಗೆ ಕಲ್ಲುರ್ಟಿ ದೈವಸ್ಥಾನ ರಸ್ತೆ, 10 ಲಕ್ಷ ವೆಚ್ಚದಲ್ಲಿ ಬೇತ, ಪಾದೆಕಲ್ಲು ರಸ್ತೆಗೆ ಶಿಲಾನ್ಯಾಸ ನೆರವೇರಿಸಲಾಯಿತು.
ಕೊಳ್ನಾಡು ಮಹಾ ಶಕ್ತಿ ಕೇಂದ್ರ ಆದ್ಯಕ್ಷ ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಮುಖರಾದ ಬಂಟ್ವಾಳ ಬೂಡ ಅಧ್ಯಕ್ಷ ದೇವದಾಸ ಶೆಟ್ಟಿ, ಜಲದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ಗೋಪಾಲಕೃಷ್ಣ ಭಟ್ ಬೇತ, ಬಿಜೆಪಿ ಮುಖಂಡ ರವೀಶ್ ಶೆಟ್ಟಿ ಕರ್ಕಳ, ರಘರಾಮ ಶೆಟ್ಟಿ ಕನ್ಯಾನ, ಲಿಂಗಪ್ಪ ಗೌಡ, ಬೇಬಿ ಆರ್ ಶೆಟ್ಟಿ, ಚಂದ್ರಾವತಿ ಮಲಾರ್, ರಾಮ ನಾಯ್ಕ್ , ಪ್ರಶಾಂತ್ ಶೆಟ್ಟಿ ಅಗರಿ, ಕರೋಪಾಡಿ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ವಿಘ್ನೇಶ್ವರ ಭಟ್, ಉಪಾಧ್ಯಕ್ಷ ಪಟ್ಲ ರಘನಾಥ ಶೆಟ್ಟಿ, ಪ್ರಮುಖರಾದ ಜಯರಾಮ್ ಮಿತ್ತನಡ್ಕ, ಲಕ್ಷಣ ಮಾಂಬಾಡಿ, ಆಶ್ವತ್ ಶೆಟ್ಟಿ, ಶಶಿಕಿರಣ್ ಶೆಟ್ಟಿ, ಸುನಿಲ್ ಪದ್ಯಾಣ, ರಂಜಿತ್ ಪಾಲಿಗೆ, ಆದರ್ಶ ಶೆಟ್ಟಿ ಪಟ್ಲ, ಜಯರಾಮ ನಾಯ್ಕ, ರಾಮಕೃಷ್ಣ ಮಲಾರ್, ರಾಜೇಶ್ ಮಿತ್ತನಡ್ಕ, ದಾಮೋದರ ಶೆಟ್ಟಿ, ಸಂಕಪ್ಪ ಶೆಟ್ಟಿ ಪಲ್ಲದಕೋಡಿ, ದಿನೇಶ್ ಮಿತ್ತನಡ್ಕ, ರಾಜೇಶ್ ಮಿತ್ತನಡ್ಕ, ಸುದರ್ಶನ ಆಳ್ವ, ವಿನೋದ್ ಶೆಟ್ಟಿ ಪಟ್ಲ, ಪುರಂದರ ಚೆಲ್ಲಂಗಾರ್, ಬಾಲಕೃಷ್ಣ ಚೆಲ್ಲಂಗಾರ್, ಶಾರದ ಚೆಲ್ಲಂಗಾರ್, ರಮನಾಥ ರಾಯಿ, ಗಣೇಶ್ ರೈ ಮಾಣಿ, ಬಾಲಕೃಷ್ಣ ಸೆರ್ಕಳ, ವಿದ್ಯೇಶ್ ರೈ ಸಾಲೆತ್ತೂರು, ವಿಕ್ಟರ್, ಲೋಕೋಪಯೋಗಿ ಇಲಾಖೆ ಹಿರಿಯ ವಿಭಾಗದ ಇಂಜಿನಿಯರ್ ಷಣ್ಮುಗಂ, ಕಿರಿಯ ವಿಭಾಗದ ಇಂಜಿನಿಯರ್ ಪ್ರೀತಂ, ಸಣ್ಣ ನೀರಾವರಿ ಇಲಾಖೆ ಯ ಇಂಜಿನಿಯರ್ ಶಿವಪ್ರಸನ್ನ. ಉಪಸ್ಥಿತರಿದ್ದರು.
Be the first to comment on "ಕರೋಪಾಡಿ ಗ್ರಾಪಂ ವ್ಯಾಪ್ತಿಯಲ್ಲಿ 7 ಕೋಟಿ ರೂಗಳಿಗೂ ಅಧಿಕ ವೆಚ್ಚದ ಕಾಮಗಾರಿ: ಶಾಸಕ ರಾಜೇಶ್ ನಾಯ್ಕ್ ಅವರಿಂದ ಉದ್ಘಾಟನೆ"