ಜಿಲ್ಲೆಯಲ್ಲಿ ಡ್ರಗ್ಸ್ ದಂಧೆ ಮಟ್ಟ ಹಾಕಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಡಿಜಿಪಿ ಪ್ರವೀಣ್ ಸೂದ್ ಅವರಿಗೆ ಮನವಿ ಸಲ್ಲಿಸಿದೆ. ಮಂಗಳೂರಿನಲ್ಲಿ ಮನವಿಯನ್ನುಡಿಜಿಪಿ ಪ್ರವೀಣ್ ಸೂದ್ ಹಾಗೂ ಮಂಗಳೂರು ನಗರ ಕಮಿಷನರ್ ವಿಕಾಶ್ ಕುಮಾರ್ ಸ್ವೀಕರಿಸಿದರು.ಎಬಿವಿಪಿಯಿಂದ ವಿಭಾಗ ಸಂಚಾಲಕ ಆಶೀಶ್ ಅಜಿಬೆಟ್ಟು ಹಾಗೂ ಮಂಗಳೂರು ನಗರ ಸಹ ಕಾರ್ಯದರ್ಶಿ ಶ್ರೇಯಸ್ ಶೆಟ್ಟಿ ಉಪಸ್ಥಿತರಿದ್ದರು.
ಮನವಿಯಲ್ಲೇನಿದೆ:
ಇಲ್ಲಿನ ವಿದ್ಯಾರ್ಥಿಗಳನ್ನು ಕೇಂದ್ರವಾಗಿರಿಸಿಕೊಂಡು ದೊಡ್ಡ ಮಟ್ಟದಲ್ಲಿ ಡ್ರಗ್ಸ್ದಂಧೆ ನಡೆಯುತ್ತಿದೆ. ಕಳೆದ ವರ್ಷಗಳಲ್ಲಿ ಪತ್ತೆಯಾಗಿರುವಗಾಂಜಾ ಪ್ರಕರಣಗಳು ಇದಕ್ಕೆ ಸಾಕ್ಷಿಯಾಗಿವೆ. ಜಿಲ್ಲೆಯ ಪೋಲಿಸ್ ಇಲಾಖೆ 2-3 ದಿನಗಳಿಂದ ನಗರ ಮತ್ತು ಜಿಲ್ಲೆಯಾದ್ಯಂತ ಉತ್ತಮ ಕಾರ್ಯವನ್ನು ನಿರ್ವಹಿಸುತ್ತಿದೆ. ಆದ್ದರಿಂದ ಪೋಲಿಸರಿಗೆ ಇನ್ನಷ್ಟುದೈರ್ಯ ಮತ್ತು ಆತ್ಮವಿಶ್ವಾಸವನ್ನುತುಂಬುವಂತಹ ಕೆಲಸಗಳು ಪೋಲಿಸ್ ಇಲಾಖೆಯಿಂದ ಆಗಬೇಕು ಯಾವುದೇ ರಾಜಕೀಯ ಪ್ರಭಾವಗಳಿಗೆ ಒಳಗಾಗದೇ ನ್ಸಿಪಕ್ಷಪಾತವಾದ ತನಿಖೆಗಳನ್ನು ಮಾಡಬೇಕೆಂದು ಎಬಿವಿಪಿ ಮನವಿಯಲ್ಲಿ ಹೇಳಿದೆ.
- ಆಯಾ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳಲ್ಲಿ ವರ್ಷದಲ್ಲಿ ಕನಿಷ್ಟ ಒಂದುಜಾಗೃತಿ ಕಾರ್ಯಕ್ರಮಗಳನ್ನು ಮಾಡವುದು ಮತ್ತುಕಾಲೇಜುಕ್ಯಾಂಪಸ್ನಲ್ಲಿಅಪರಾಧತಡೆಹಿಡಿಯುವ ಮಾಹಿತಿಅಂಟಿಸುವುದು.
- ಕಾಲೇಜುಕ್ಯಾಂಪಸ್ ಬಳಿ ಇರುವ ಪಾನ್ ಶಾಪ್, ಜೆರಾಕ್ಸ್ ಶಾಪ್, ಹೊಟೇಲ್, ಬೇಕರಿ ಮತ್ತುಜ್ಯೂಸ್ ಸೆಂಟರ್ಗಳ ಮೇಲೆ ನಿಗಾವಹಿಸಬೇಕು.
- ನಗರದಲ್ಲಿರುವ ಸರ್ಕಾರಿ, ಖಾಸಗಿ ಹಾಸ್ಟೆಲ್ಗಳು ಮತ್ತು ಪಿ.ಜಿಗಳು ನಡೆಸುತ್ತಿರುವವರ ಮಾಹಿತಿಯನ್ನು ಪಡೆದುಅಲ್ಲಿಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು. ಅವುಗಳ ಮೇಲೆ ಹೆಚ್ಚಿನನಿಗಾವಹಿಸಬೇಕು.
- ಕ್ಯಾಂಪಸ್ಗಳ ಸುತ್ತ–ಮುತ್ತ ದಿನಕ್ಕೆ ಒಂದು ಭಾರಿಯಾದರು ಪೋಲಿಸ್ ವಾಹನಗಳು ಗಸ್ತು ಡಬೇಕು.
- ಈಗಾಗಲೇ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುವುರನ್ನುಗೂಂಡಾಕಾಯಿದೆಯಲ್ಲಿ ಪ್ರಕರಣವನ್ನುದಾಖಲಿಸಬೇಕು.
- ಒಂದು ವೇಳೆ ವಿದ್ಯಾರ್ಥಿಗಳು ಇಂತಹಪ್ರಕರಣಗಳಲ್ಲಿ ಸಿಕ್ಕಿಬಿದ್ದರೆ, ಅಂತಹ ವಿದ್ಯಾರ್ಥಿಗಳನ್ನು ಪೋಲಿಸ್ ಇಲಾಖಾ ವ್ಯಾಪ್ತಿಯಲ್ಲಿಕೌನ್ಸಲಿಂಗ್ ಮಾಡಬೇಕು ಎಂಬ ಸಲಹೆಗಳನ್ನೂ ಎಬಿವಿಪಿ ನೀಡಿದೆ.
Be the first to comment on "ಜಿಲ್ಲೆಯಲ್ಲಿ ಡ್ರಗ್ಸ್ ದಂಧೆ ಮಟ್ಟಹಾಕಿ: ಡಿಜಿಪಿಗೆ ಎಬಿವಿಪಿ ನೀಡಿದ ಮನವಿಯಲ್ಲೇನಿದೆ?"