ಬಂಟ್ವಾಳ: ಯುವಶಕ್ತಿ ಕಡೇಶ್ವಾಲ್ಯ ಸಂಘಟನೆ ಆಶ್ರಯದಲ್ಲಿ ಆಯುಷ್ಮಾನ್ ಭಾರತ್ ಕಾರ್ಡ್ ನೋಂದಣಿ ಮತ್ತು ವಿತರಣೆ ಪೆರ್ಲಾಪು ಶಾಲಾ ವಠಾರದಲ್ಲಿ ನಡೆಯಿತು.
ಬಿಜೆಪಿ ಬಂಟ್ವಾಳ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಆಯುಷ್ಮಾನ್ ಕಾರ್ಡ್ ವಿತರಿಸಿದರು. ಮಂಗಳೂರು ಯಮುನಾ ಗ್ರೂಪ್ ನ ಪುರುಷೋತ್ತಮ ಶೆಟ್ಟಿ ನಡ್ಯೇಲು ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು.
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಜಿಪಂ ಸದಸ್ಯೆ ಕಮಲಾಕ್ಷಿ ಕೆ. ಪೂಜಾರಿ, ಗೋಳ್ತಮಜಲು ಶಕ್ತಿಕೇಂದ್ರ ಅಧ್ಯಕ್ಷ ರಮಾನಾಥ ರಾಯಿ, ತಾಪಂ ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು, ನೇರಳಕಟ್ಟೆ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಪುಷ್ಪರಾಜ ಚೌಟ, ಗ್ರಾಪಂ ಮಾಜಿ ಅಧ್ಯಕ್ಷೆ ಶ್ಯಾಮಲ ಶೆಟ್ಟಿ, ಪ್ರಮುಖರಾದ ಗಣೇಶ್ ಶೆಟ್ಟಿ ಮಾಣಿ, ಯುವಶಕ್ತಿ ಕಡೇಶಿವಾಲಯ ಗೌರವಾಧ್ಯಕ್ಷ ವಿದ್ಯಾಧರ ರೈ,ಪಂಚಾಯಿತಿ ಮಾಜಿ ಸದಸ್ಯ ಸುರೇಶ್ ಕನ್ನೊಟ್ಟು, ಸಿ.ಎಸ್.ಸಿ. ಜಿಲ್ಲಾ ಪ್ರಬಂಧಕ ಶವೀನ್ , ಹಿಂಜಾವೇ ತಾಲೂಕು ಪ್ರಚಾರಕ್ ಶರತ್ ಬಿ ಶೆಟ್ಟಿ, ಪ್ರತಾಪನಗರ ಶ್ರೀರಾಮ ಭಜನಾ ಮಂದಿರ ಅಧ್ಯಕ್ಷ ಭಾಸ್ಕರ ಮುಂಡಾಲ, ಯುವಶಕ್ತಿ ಕಡೇಶ್ವಾಲ್ಯ ಅಧ್ಯಕ್ಷ ದೇವಿಪ್ರಸಾದ್ ಬೇಂಗದಡಿ ಮತ್ತು ಸದಸ್ಯರು ಉಪಸ್ಥಿತರಿದ್ದರು. 750ಕ್ಕೂ ಅಧಿಕ ಫಲಾನುಭವಿಗಳಿಗೆ ಉಚಿತ ಆಯುಷ್ಮಾನ್ ಭಾರತ್ ಕಾರ್ಡನ್ನು ವಿತರಿಸಲಾಯಿತು. ತಿಲಕ್ ಮುಂಡಾಲ ಸ್ವಾಗತಿಸಿದರು. ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸುರೇಶ್ ಬನಾರಿ ಕಾರ್ಯಕ್ರಮ ಸಂಯೋಜಿಸಿದರು.
Be the first to comment on "ಯುವಶಕ್ತಿ ಕಡೇಶಿವಾಲಯ ಆಶ್ರಯದಲ್ಲಿ ಆಯುಷ್ಮಾನ್ ಭಾರತ್ ನೋಂದಣಿ"