ಬಂಟ್ವಾಳ: ಶ್ರೀ ಕ್ಷೇ.ಧ.ಗ್ರಾ. ಯೋ. ಬೀ. ಸಿ. ಟ್ರಸ್ಟ್ (ರಿ); ಬಂಟ್ವಾಳ ತಾಲೂಕು, ಸಿದ್ಧಕಟ್ಟೆ ವಲಯ ಹಾಗೂ ತೋಟಗಾರಿಕಾ ಇಲಾಖೆ ಜಂಟಿ ಆಶ್ರಯದಲ್ಲಿ ಅಣಬೆ ಬೇಸಾಯ ತರಬೇತಿ, ಮಾಹಿತಿ, ಪ್ರಾತ್ಯಕ್ಷಿಕೆ ಕಾರ್ಯಕ್ರಮ ಕುಕ್ಕಿಪಾಡಿ ಪಂಚಾಯತ್ ಸಭಾಂಗಣದಲ್ಲಿ ಜರಗಿತು.
ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರ ಉದ್ಘಾಟಿಸಿದರು. ಡಾ. ಹೆಗ್ಗಡೆಯವರ ಚಿಂತನೆಗಳು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸಾಕಾರಗೊಳ್ಳುತ್ತಿದೆ. ಅದೆಷ್ಟೋ ಜನರಿಗೆ ದಾರಿ ದೀಪವಾಗಿ ಸ್ವಯಂ ಕೃಷಿ, ಸ್ವ ಉದ್ಯೋಗದ ಮೂಲಕ ಸ್ವಾವಲಂಬಿಗಳಾಗಿದ್ದಾರೆ ಎಂದು ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ. ಶುಭ ಹಾರೈಸಿದರು. ಕುಕ್ಕಿಪಾಡಿ ಎ ಒಕ್ಕೂಟ ಅಧ್ಯಕ್ಷೆ ಸುಜಾತ ರಾಜು ಪೂಜಾರಿ ಅಧ್ಯಕ್ಷತೆಯಲ್ಲಿ ಸಂಪನ್ಮೂಲ ವ್ಯಕ್ತಿ ಪಾಂಡುರಂಗ,ತೋಟಗಾರಿಕೆ ನಿರ್ದೇಶಕ ಪ್ರದೀಪ್, ವಲಯಾಧ್ಯಕ್ಷ ಸದಾನಂದ ಶೀತಲ್, ಸ್ವಸಹಾಯ ಸಂಘಗಳ ಕೇಂದ್ರ ಸಮಿತಿ ನಿಕಟಪೂರ್ವ ಅಧ್ಯಕ್ಷ ಚಂದಪ್ಪ ಮೂಲ್ಯ, ಸ್ಥಳೀಯ ಜನ ಪ್ರತಿನಿಧಿಗಳು, ಒಕ್ಕೂಟಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದರು. ಸಿದ್ಧಕಟ್ಟೆ ವಲಯ ಮೇಲ್ವಿಚಾರಕಿ ಹರಿಣಾಕ್ಷಿ ರೈ ನಿರೂಪಿಸಿದರು. ತಾಲೂಕು ಕೃಷಿ ಅಧಿಕಾರಿ ಜನಾರ್ಧನ್ ಸ್ವಾಗತಿಸಿ ಸೇವಾ ಪ್ರತಿನಿಧಿ ಮಾಧವ ವಂದಿಸಿದರು.
Be the first to comment on "ಅಣಬೆ ಬೇಸಾಯ ತರಬೇತಿ"