ಬಂಟ್ವಾಳ: ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಮಾದುಕೋಡಿ ಎಂಬಲ್ಲಿ ಗೋಡೆಯ ಇಟ್ಟಿಗೆ ಕುಸಿದು ಓರ್ವ ಯುವಕ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ಭಾನುವಾರ ನಡೆದಿದೆ. ಶಂಭೂರು ನಿವಾಸಿ ಜನಾರ್ದನ (38) ಮೃತಪಟ್ಟ ಯುವಕ. ಮಾದುಕೋಡಿಯಲ್ಲಿ ನಡೆಯುತ್ತಿದ್ದ ಶ್ರಮದಾನದಲ್ಲಿ ಪಾಲ್ಗೊಳ್ಳುವುದಕ್ಕೆ ಯುವಕ ತೆರಳಿದ್ದು, ಆ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ. ಶ್ರಮದಾನಕ್ಕೆಂದು ತೆರಳಿದ್ದ ಜನಾರ್ದನ ಮೇಲೆ ಸಿಮೆಂಟ್ ಇಟ್ಟಿಗೆಯ ಗೋಡೆಯು ಕುಸಿದು ಬಿತ್ತು. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸ್ಥಳಕ್ಕೆ ಪಾಣೆಮಂಗಳೂರು ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ಗ್ರಾಮ ಲೆಕ್ಕಾಧಿಕಾರಿ ಪ್ರಶಾಂತ್, ಸಿಬ್ಬಂದಿ ರೂಪೇಶ್ ಸ್ಥಳ ಪರಿಶೀಲನೆ ನಡೆಸಿ ಮಹಜರು ನಡೆಸಿದರು.
Be the first to comment on "ಶ್ರಮದಾನಕ್ಕೆಂದು ಹೋದ ಯುವಕ ಗೋಡೆ ಕುಸಿದು ಸಾವು"