ಭಾರತೀಯ ಜನತಾ ಪಾರ್ಟಿ, ರೈತಮೋರ್ಚಾ ಬಂಟ್ವಾಳ ಕ್ಷೇತ್ರ, ಕೊಳ್ನಾಡು ಬಿಜೆಪಿ ನೇತೃತ್ವದಲ್ಲಿ ಭಾರತ ಸರಕಾರದ ಆರೋಗ್ಯ ಇಲಾಖೆಯ ಮಹತ್ವಾಕಾಂಕ್ಷೆಯ ಆಯುಷ್ಮಾನ್ ಕಾರ್ಡ್ ನೋಂದಣಿ ಕಾರ್ಯಕ್ರಮ ಕೊಳ್ನಾಡು ಗ್ರಾಮದ ಸಾಲೆತ್ತೂರಿನ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಭೇಟಿ ನೀಡಿ ಆಯುಷ್ಮಾನ್ ಕಾರ್ಡ್ ನೋಂದಣಿಯ ಪ್ರಗತಿ ಪರಿಶೀಲಿಸಿದರು.ಈ ಸಂದರ್ಭ ತಾಲೂಕು ಪಂಚಾಯತ್ ಸದಸ್ಯ ಕುಲ್ಯಾರು ನಾರಾಯಣ ಶೆಟ್ಟಿ, ಬೂಡ ಅಧ್ಯಕ್ಷರಾದ ಬಿ.ದೇವದಾಸ ಶೆಟ್ಟಿ, ಕ್ಷೇತ್ರ ರೈತ ಮೋರ್ಚಾ ಅಧ್ಯಕ್ಷ ವಿಶ್ವನಾಥ್ ಪೂಜಾರಿ, ಪ್ರಮುಖರಾಧ ಬಾಲಕೃಷ್ಣ ಸೆರ್ಕಳ, ಪ್ರಶಾಂತ್ ಶೆಟ್ಟಿ ಅಗರಿ, ಜಯರಾಮ್ ನಾಯ್ಕ್ ಕುಂಟ್ರಕಲ, ಶಿವಪ್ರಸಾದ್ ಶೆಟ್ಟಿ, ಲೋಹಿತ್, ವೇಣುಗೋಪಾಲ್ ಮಂಕುಡೆ, ಗಂಗಾಧರ್ ಆಚಾರ್ಯ, ಸದಾನಂದ ಶೆಟ್ಟಿ ಅಗರಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು
Be the first to comment on "ಆಯುಷ್ಮಾನ್ ಕಾರ್ಡ್: ಬಿಜೆಪಿಯಿಂದ ಕೊಳ್ನಾಡಿನಲ್ಲಿ ನೋಂದಣಿ ಅಭಿಯಾನ"