ಬಂಟ್ವಾಳ: ಶ್ರೀ ಕ್ಷೇ.ಧ.ಗ್ರಾ. ಯೋ. ಬೀ ಸಿ ಟ್ರಸ್ಟ್ (ರಿ); ಬಂಟ್ವಾಳ, ಸಿದ್ಧಕಟ್ಟೆ ವಲಯ, ಪ್ರೇರಣಾ ಜ್ಞಾನವಿಕಾಸ ಕೇಂದ್ರ ಕೊಡಂಬೆಟ್ಟು ಆಶ್ರಯದಲ್ಲಿ ಅಯುಷ್ಮಾನ್ ಆರೋಗ್ಯ ವಿಮೆ ನೋಂದಾವಣೆ ಬಗ್ಗೆ ಮಾಹಿತಿ, ನೋಂದಾವಣೆ, ಕಾರ್ಡ್ ವಿತರಣೆ ಕಾರ್ಯಕ್ರಮ ಜರಗಿತು.
ಸಂಪನ್ಮೂಲ ವ್ಯಕ್ತಿಯಾಗಿ ಸೌಮ್ಯ ಮಾಧವ ಭಾಗವಹಿಸಿದರು. ಒಕ್ಕೂಟ ಅಧ್ಯಕ್ಷ ವೆಂಕಟರಮಣ ಗಟ್ಟಿ ಅಧ್ಯಕ್ಷತೆಯಲ್ಲಿ ಯೋಜನಾಧಿಕಾರಿ ಜಯಾನಂದ ಪಿ. ಉದ್ಘಾಟಿಸಿದರು. ಜ್ಞಾನ ವಿಕಾಸ ಸಂಯೋಜಕಿ ಗುಣವತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕವಿತಾ ಸ್ವಾಗತಿಸಿ, ಅನಿತಾ ಪ್ರಭು ವಂದಿಸಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸಪ್ನಾ, ವಲಯ ಮೇಲ್ವಿಚಾರಕಿ ಹರಿಣಾಕ್ಷಿ ರೈ, ಸೇವಾ ಪ್ರತಿನಿಧಿ ಮೋಹನದಾಸ್ ಗಟ್ಟಿ, ಒಕ್ಕೂಟಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
Be the first to comment on "ಆಯುಷ್ಮಾನ್ ಆರೋಗ್ಯ ವಿಮೆ ಮಾಹಿತಿ, ನೋಂದಾವಣೆ"