ಬಿ.ಸಿ.ರೋಡಿನ ಕೈಕುಂಜೆಯಲ್ಲಿರುವ ಹಿಂದು ರುದ್ರಭೂಮಿಯ ನಿರ್ವಹಣೆಗೆ ನೂತನ ಪಾಲನಾ ಸಮಿತಿ ರಚನೆಗೊಂಡಿದ್ದು, ಗಣೇಶ ಚತುರ್ಥಿಯ ದಿನವಾದ ಶನಿವಾರ ರುದ್ರಭೂಮಿ ದ್ವಾರದಲ್ಲಿರುವ ಶಿವಲಿಂಗಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸೇವಾ ಕಾರ್ಯಗಳನ್ನು ಆರಂಭಿಸಿತು.
ಶ್ರೀ ರಕ್ತೇಶ್ವರಿ ದೇವಸ್ಥಾನದಲ್ಲಿ ಪ್ರಾರ್ಥನೆಯ ಬಳಿಕ ರುದ್ರಭೂಮಿಗೆ ಆಗಮಿಸಿದ ಸಮಿತಿ ಸದಸ್ಯರು ಮತ್ತು ಸಾರ್ವಜನಿಕರು, ಶಿವಲಿಂಗಕ್ಕೆ ಪುಷ್ಪಾರ್ಚನೆ ನಡೆಸಿದರು. ಬಳಿಕ ರುದ್ರಭೂಮಿಯ ಆವರಣದಲ್ಲಿ ಸಸಿ ನೆಟ್ಟರು. ರುದ್ರಭೂಮಿಗೆ ಹೊಸರೂಪ ನೀಡುವ ಯೋಜನೆ ಇದ್ದು, ಈಗಾಗಲೇ ಶಾಸಕ ರಾಜೇಶ್ ನಾಯ್ಕ್ ಅವರು ಇದಕ್ಕೆ ನೆರವು ನೀಡುವ ಭರವಸೆ ನೀಡಿದ್ದಾರೆ. ವಿದ್ಯುತ್ ಚಿತಾಗಾರ ಸಹಿತ ಕಟ್ಟಡ ಪುನರ್ನಿರ್ಮಾಣದ ಯೋಜನೆಯೂ ಇದೆ ಎಂದು ಪಾಲನಾ ಸಮಿತಿ ಅಧ್ಯಕ್ಷ ಕೇಶವ ದೈಪಲ ಹೇಳಿದ್ದಾರೆ. ಈ ಸಂದರ್ಭ ಪ್ರಮುಖರಾದ ಬಿ.ಮೋಹನ್, ಪಾಲನಾ ಸಮಿತಿ ಕಾರ್ಯದರ್ಶಿ ಮಚ್ಚೇಂದ್ರ ಸಾಲಿಯಾನ್, ಸಮಿತಿ ಉಪಾಧ್ಯಕ್ಷರಾದ ಬಿ.ರಾಮಚಂದ್ರರಾವ್ ಕೈಕುಂಜೆ, ಗಣೇಶ್ ದಾಸ್ ಪಲ್ಲಮಜಲು, ಭಾಸ್ಕರ ಕುಲಾಲ್ ಕಾಮಾಜೆ , ಚರಣ್ ಜುಮಾದಿಗುಡ್ಡೆ, ಕೋಶಾಧಿಕಾರಿ ಸುರೇಶ್ ಸಾಲಿಯಾನ್ ಚಿಕ್ಕಯ್ಯಮಠ, ಪ್ರಧಾನ ಸಂಚಾಲಕ ಪದ್ಮನಾಭ ಗಟ್ಟಿ ಚಿಕ್ಕಯಮಠ, ಸಹಸಂಚಾಲಕರು ಮತ್ತು ಪ್ರಮುಖರಾದ ಭಾಸ್ಕರ ಟೈಲರ್, ಶಿವಶಂಕರ ರಾವ್ ಅಲೆತ್ತೂರು, ಭೋಜ ಸಾಲಿಯಾನ್ ಕೈಕಂಬ, ವಿಶ್ವನಾಥ ಬಿ. ಗೋವರ್ಧನ ರಾವ್ ಕೈಕಂಬ, ಕೇಶವ ಪೂಜಾರಿ ಪೆರ್ನೆ, ರಮನಾಥ ರಾಯಿ, ಲತೇಶ್, ರಕ್ಷಿತ್, ಪ್ರಮೋದ್ ಕುಮಾರ್, ಸುರೇಶ್ ಟೈಲರ್, ಚಂದಪ್ಪ ರಾಜಪಲ್ಕೆ, ಕಿಶೋರ್ ರಾಜಪಲ್ಕೆ, ಸುನಿಲ್, ಜಯಂತ್, ಪ್ರಣಾಮ್ ಅಜ್ಜಿಬೆಟ್ಟು, ಪ್ರಶಾಂತ್ ಪಚ್ಚು, ಡೊಂಬಯ್ಯ ಮೊಡಂಕಾಪು ಮೊದಲಾದವರು ಉಪಸ್ಥಿತರಿದ್ದರು.
23-8-2020 ಕ್ಕೆ ಬೆಳಗ್ಗೆ 9:00ಕ್ಕೆ ಬಿ.ಸಿ.ರೋಡ್, ಕೈಕುಂಜೆಯ ಹಿಂದೂ ರುಧ್ರಭೂಮಿಯ ಪಾಲನಾ ಸಮಿತಿಯ ಸಭೆ ಹಾಗೂ ಶ್ರಮ ಸೇವೆ (ಶ್ರಮದಾನ)ವಿದ್ದು ಎಲ್ಲಾ ಭಾಂದವರು ಹಾಗೂ ಎಲ್ಲಾ ಸಂಘ ಸಂಸ್ಥೆಯವರು ಪಾಲ್ಗೊಳ್ಳಬೇಕಾಗಿ ವಿನಂತಿಸಲಾಗಿದೆ.
Be the first to comment on "ಕೈಕುಂಜೆ ಹಿಂದು ರುದ್ರಭೂಮಿಯಲ್ಲಿ ಶಿವನಿಗೆ ಪುಷ್ಪಾರ್ಚನೆ ಮೂಲಕ ಸೇವೆ ಆರಂಭ"