ಲೇಖಕ ನಿರಂತರ ಅಧ್ಯಯನಶೀಲನಾಗುವ ಜತೆಗೆ ತನ್ನ ಆವರಣವನ್ನು ಗಟ್ಟಿ ಮಾಡಿಕೊಂಡಾಗ ಆತನಿಂದ ಇನ್ನಷ್ಟು ಉತ್ತಮ ಬರಹಗಳು ಹೊರಹೊಮ್ಮಲು ಸಾಧ್ಯ ಎಂದು ಸಾಹಿತಿ ವಿವೇಕಾನಂದ ಕಾಮತ್ ಹೇಳಿದರು.
ಬಿಜೈ ಭಾರತಿನಗರದ ಆ್ಯಡ್ ಐಡಿಯಾದಲ್ಲಿ ಗುರುವಾರ ಯುವಲೇಖಕ, ಪತ್ರಕರ್ತ ಧೀರಜ್ ಪೊಯ್ಯೆಕಂಡ ಅವರ ‘ಮಿತಿ’ ಚೊಚ್ಚಲ ಕಾದಂಬರಿ ಬಿಡುಗಡೆಗೊಳಿಸಿ ಮಾತನಾಡಿದರು. ಸಾಹಿತ್ಯ ಕಲ್ಲುಬಂಡೆಯಲ್ಲಿ ಮೂಡಿಬರುವ ಮೂರ್ತಿಯಂತೆ. ನಮ್ಮನ್ನು ನಾವೇ ಕೆತ್ತಿಕೊಂಡು, ಅದು ಅಲಂಕಾರಕ್ಕೆ ಆಗಬೇಕೆ, ಇಲ್ಲವೇ ಓದುಗರ ಮನಸ್ಸಲ್ಲಿ ಸ್ಥಾಪನೆಯಾಗಬೇಕೆ ಎನ್ನುವುದು ಲೇಖಕನ ಅಧ್ಯಯನಶೀಲತೆಯಿಂದ ಹೊರಬರುತ್ತದೆ ಎಂದರು.
ಕಾದಂಬರಿ ಪರಿಚಯ ಮಾಡಿದ ಬರಹಗಾರ್ತಿ ರಶ್ಮಿ ಶರ್ಮ, ಈ ಕಾದಂಬರಿ ನೈಜತೆಗೆ ತುಂಬಾ ಹತ್ತಿರವಾಗಿದೆ. ನಮ್ಮ ಸುತ್ತಮುತ್ತ ನಡೆಯುವ ವಿಷಯಗಳೇ ಈ ಪುಸ್ತಕದ ಪ್ರಮುಖ ವಸ್ತುವಾಗಿದೆ. ಮಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳನ್ನು ಪರಿಚಯಿಸುವ ಕೆಲಸವೂ ಈ ಕಾದಂಬರಿ ಮೂಲಕ ಆಗಿದೆ ಎಂದು ವಿವರಿಸಿದರು.ಮಂಗಳೂರು ವಿಶ್ವವಿದ್ಯಾಲಯ ಪತಿಕೋದ್ಯಮ ವಿಭಾಗದ ಹಳೆ ವಿದ್ಯಾರ್ಥಿ ಸಂಘಟನೆ (ಮಾಮ್) ಗೌರವಾಧ್ಯಕ್ಷ ವೇಣು ಶರ್ಮ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ದಿನಕರ ಇಂದಾಜೆ ಉಪಸ್ಥಿತರಿದ್ದರು.
ಪತ್ರಕರ್ತರಾದ ಕೃಷ್ಣಮೋಹನ್ ಕಾರ್ಯಕ್ರಮ ನಿರೂಪಿಸಿದರು. ವೇಣುವಿನೋದ್ ಕೆ.ಎಸ್. ಸ್ವಾಗತಿಸಿದರು. ಧೀರಜ್ ಪೊಯ್ಯೆಕಂಡ ವಂದಿಸಿದರು. ಅವನಿ ಶರ್ಮ ಸಹಕರಿಸಿದರು.
Be the first to comment on "ಧೀರಜ್ ಪೊಯ್ಯೆಕಂಡ ಅವರ ‘ಮಿತಿ’ ಕಾದಂಬರಿ ಬಿಡುಗಡೆ"