ಶುಕ್ರವಾರ ರಾತ್ರಿಯಿಂದೀಚೆಗೆ ಸುರಿದ ಭಾರಿ ಮಳೆಗೆ ಬಂಟ್ವಾಳ ತಾಲೂಕಿನ ಒಟ್ಟು 6.73 ಹೆಕ್ಟೇರ್ ತೋಟಗಾರಿಕೆ ಹಾಗೂ 20.2 ಹೆಕ್ಟೇರ್ ಕೃಷಿ ಭೂಮಿಗೆ ಹಾನಿಯಾಗಿದೆ. 2 ಅಂಗನವಾಡಿಗಳ ಆವರಣಗೋಡೆ ಕುಸಿದ ಪ್ರಕರಣಗಳಿದ್ದರೆ, 2 ಮನೆಗಳು ಭಾಗಶಃ ಹಾನಿಯಾಗಿದೆ ಎಂದು ಕಂದಾಯ ಇಲಾಖೆ ಮಾಹಿತಿ ತಿಳಿಸಿದೆ.
ಅಜ್ಜಿಬೆಟ್ಟು ಗ್ರಾಮದ ದಂಬೆಮಾರ್ ಎಂಬಲ್ಲಿ ಜಯ ಶೆಟ್ಟಿ, ಮಹಾಬಲ ಶೆಟ್ಟಿ, ಬೂಬ ಶೆಟ್ಟಿ ಅವರ 1.2 ಹೆಕ್ಟೇರ್ ಅಡಿಕೆ ತೋಟದಲ್ಲಿ ನೀರು ನಿಂತಿದೆ. ಕಾವಳಮುಡೂರು ಗ್ರಾಮದ ಶ್ರೀನಿವಾಸ ನಾಯಕ್ ಅಡಿಕೆ ತೋಟಕ್ಕೆ ನೀರುನುಗ್ಗಿ 0.25 ಹೆಕ್ಟೇರ್ ಭಾಗದಲ್ಲಿ ನಿಂತಿದೆ. ಕಳ್ಳಿಗೆ ಗ್ರಾಮದ ಲೀಲಾ ಅವರ ಅಡಿಕೆ ತೋಟಕ್ಕೆ 0.25 ಹೆಕ್ಟೇರ್ ಭಾಗದಲ್ಲಿ ನೀರು ನುಗ್ಗಿದೆ. ವಿಟ್ಲ ಕಸ್ಬಾ ಗ್ರಾಮದ ಹಾಜಿರಮ್ಮ ಮನೆಗೆ ಭಾಗಶಃ ಹಾನಿ, ಕುಕ್ಕಿಪ್ಪಾಡಿ ಗ್ರಾಮದ ಪ್ರಕಾಶ್ ಅವರ ಅಡಿಕೆ ತೋಟಕ್ಕೆ ಬರೆ ಜರಿದು 0.1 ಹೆಕ್ಟೇರ್ ತೋಟಕ್ಕೆ ಹಾನಿ, ಕುಡಂಬೆಟ್ಟು ಗ್ರಾಮದ ಹರ್ಕಾಡಿ ಎಂಬಲ್ಲಿ ತೋಡಿನ ಬದಿ ಜರಿದು ಸುಮಾರು 13 ಹೆಕ್ಟೇರ್ ಗದ್ದೆ ನೀರು ನಿಂತು ಹಾನಿ, ನರಿಕೊಂಬು ಗ್ರಾಮದಲ್ಲಿ ನೇತ್ರಾವತಿ ನದಿ ನೀರಿನಿಂದ ಸುಮಾರು 5 ಹೆಕ್ಟೇರ್ ತೋಟಕ್ಕೆ ನೀರು, ಕುರಿಯಾಳ ಬೂಬ ಮೂಲ್ಯ ಅವರ ಕಚ್ಚಾ ಮನೆ ಭಾಗಶಃ ಹಾನಿ, ಎಲಿಯನಡುಗೋಡು ಗ್ರಾಮದ ಪ್ರವೀಣ್ ಪೂಜಾರಿ ಅವರ 0.1 ಹೆ. ಭತ್ತದ ಗದ್ದೆಗೆ ನೀರು, ಕಾಡಬೆಟ್ಟು ಗ್ರಾಮದ ಸತೀಶ್ ಸಪಲ್ಯ ತೋಟಕ್ಕೆ ನೀರು ನುಗ್ಗಿ 0.1 ಹೆಕ್ಟೇರ್ ತೋಟದಲ್ಲಿ ನೀರು ನಿಂತಿದೆ. ಕುಡಂಬೆಟ್ಟು ತಿಮ್ಮೊಟ್ಟುಬೈಲು ಎಂಬಲ್ಲಿ ತೋಡಿನ ಬದಿ ಜರಿದು 7 ಹೆಕ್ಟೇರ್ ಭತ್ತದ ಗದ್ದೆಗೆ ನೀರು, ಮಾಣಿ ಗ್ರಾಮದ ಅಣ್ಣು ಮೂಲ್ಯ ದನದ ಕೊಟ್ಟಿಗೆಗೆ ಹಾನಿ, ಬಾಳ್ತಿಲ ಕಶೆಕೋಡಿ ಗ್ರಾಮದ ಹಾಗೂ ಕುಕ್ಕಿಪ್ಪಾಡಿ ಸಿದ್ಧಕಟ್ಟೆ ಅಂಗನವಾಡಿ ಕೇಂದ್ರದ ಆವರಣಗೋಡೆ ಕುಸಿದಿದೆ. ಕಾವಳಮುಡೂರು ಯಶೋಧರ ಅಂಚನ್ ಗದ್ದೆ ಬದಿ ಜರಿದು 0.1 ಹೆಕ್ಟೇರ್ ತೋಟಕ್ಕೆ ಹಾನಿ, ನೆಟ್ಲಮುಡ್ನೂರು ಗ್ರಾಮದ ಸುರೇಶ್ ರೈ ದನದ ಹಟ್ಟಿಗೆ ಹಾನಿಯಾಗಿದೆ. ಬರಿಮಾರು ಗ್ರಾಮದ ನೇತ್ರಾವತಿ ನದಿ ನೀರಿನಿಂದ 7 ಜನರ ಅಂದಾಜು 2 ಹೆಕ್ಟೇರ್ ತೋಟಕ್ಕೆ ನೀರು ನುಗ್ಗಿದೆ. ಎಲಿಯನಡುಗೋಡು ಶಿವರಾಮ ಶೆಟ್ಟಿ ಅವರ ಬತ್ತದ ಗದ್ದೆಗೆ ನೀರು ನುಗ್ಗಿ 0.1 ಹೆಕ್ಟೇರ್ ಗದ್ದೆ ಹಾನಿ, ಬಾಳ್ತಿಲ ಗ್ರಾಮ ಲವೀನ ಸೀಕ್ವೇರ ಅವರ 0.1 ಹೆ.ಅಡಿಕೆ ತೋಟಕ್ಕೆ ಹಾನಿಯಾಗಿದೆ ಎಂದು ಇಲಾಖಾ ಮಾಹಿತಿ ತಿಳಿಸಿದೆ.
Be the first to comment on "ಬಂಟ್ವಾಳ ತಾಲೂಕಿನಲ್ಲಿ ಕೃಷಿ, ತೋಟಗಾರಿಕೆಯ 26.93 ಹೆಕ್ಟೇರ್ ಭೂಮಿಗೆ ಹಾನಿ"