ಪ್ರತಿ ವರ್ಷ ಕಾಣಿಸುವ ಹೊಂಡ ಈ ವರ್ಷವೂ ಉದ್ಭವವಾಗಿದೆ. ಮೇಲ್ಕಾರ್ ನ ಸಂಚಾರಿ ಪೊಲೀಸ್ ಠಾಣೆಯ ಪಕ್ಕದಲ್ಲಿ ಹೆದ್ದಾರಿಯಲ್ಲಿ ಹೊಂಡ ಕಾಣಿಸಿಕೊಂಡಿದೆ. ಇದು ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸ್ಥಿತಿ. ಈ ಬಾರಿ ವಾಹನ ಸಂಚಾರ ಕಡಿಮೆ ಇದ್ದರೂ ರಸ್ತೆ ಅಧೋಗತಿ.
ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಬಳಿಯೂ ಹೊಂಡಗಳಿವೆ. ಆದರೆ ಕಳೆದ ವರ್ಷದಷ್ಟು ಅಪಾಯಕಾರಿಯಾಗಿಲ್ಲ. ಮಳೆ ಬಂದರೆ ರಸ್ತೆಗೆ: ಮಳೆ ನೀರು ಹರಿದು ಹೋಗುವುದಕ್ಕೆ ಸರಿಯಾದ ವ್ಯವಸ್ಥೆಯನ್ನು ಇನ್ನೂ ಕಲ್ಪಿಸಲಾಗಿಲ್ಲ. ಗುಡ್ಡದ ನೀರು ನೇರವಾಗಿ ಹೆದ್ದಾರಿಗೆ ಹರಿಯುವುದು ಹಲವು ವರ್ಷಗಳಿಂದ ಕಂಡುಬರುತ್ತಿದೆ. ಹೊಂಡಗಳಲ್ಲಿ ಮಳೆ ನೀರು ನಿಲ್ಲುವ ವೇಳೆ ವಾಹನ ಸವಾರಿ ಅಪಾಯಕಾರಿ. ಕಳೆದ ವರ್ಷ ಬಿ.ಸಿ.ರೋಡಿನಿಂದ ಕಲ್ಲಡ್ಕವರೆಗೆ ಹೆದ್ದಾರಿ ಅಧೋಗತಿಯಲ್ಲಿತ್ತು. ಈ ಬಾರಿ ವಾಹನ ಸಂಚಾರ ಇಳಿಮುಖವಾಗಿದ್ದರೂ ಧಾರಾಕಾರ ಮಳೆಯಾಗದೇ ಇದ್ದರೂ ರಸ್ತೆಯಲ್ಲಿ ಹೊಂಡ ಕಾಣಿಸಿಕೊಂಡಿರುವುದು ಜನರ ಆಕ್ಷೇಪಕ್ಕೆ ಕಾರಣವಾಗಿದೆ.
Be the first to comment on "ಮೇಲ್ಕಾರ್ ಸಮೀಪ ಮತ್ತದೇ ಹೊಂಡ, ವಾಹನ ಸಂಚಾರ ಕಡಿಮೆ ಇದ್ದರೂ ಹದಗೆಟ್ಟಿದೆ ಹೆದ್ದಾರಿ"