READ HERE FOR COMPLETE DETAILS
ಎಂದಿನಂತೆಯೇ ಬೆಂಗಳೂರು ನಗರದಲ್ಲಿ ಗರಿಷ್ಠ ಸಂಖ್ಯೆಯ ಕೊರೊನಾ ಪೇಷಂಟ್ ಗಳಿದ್ದರೆ, ಅದರ ನಂತರದ ಸ್ಥಾನ ದಕ್ಷಿಣ ಕನ್ನಡ ಜಿಲ್ಲೆ. ಬೆಂಗಳೂರು ನಗರದಲ್ಲಿ ಒಟ್ಟು 1447 ಹೊಸ ಕೇಸ್ ಸೇರಿ, 15,329 ಮಂದಿಗೆ ಸೋಂಕು ತಗಲಿದ್ದರೆ, ಇಂದು 601 ಮಂದಿ ಸೇರಿ 3435 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಆದರೆ 206 ಮಂದಿ ಸಾವನ್ನಪ್ಪಿದ್ದಾರೆ. ಇದೀಗ ಬೆಂಗಳೂರಿನಲ್ಲಿರುವ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 11,687.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 139 ಮಂದಿಗೆ ಇಂದು ಸೋಂಕು ತಗಲಿದ್ದರೆ, ಒಟ್ಟು ಸೋಂಕಿತರ ಸಂಖ್ಯೆ 1840 ಆಗಿದೆ. ಇಂದು 46 ಮಂದಿ ಸೇರಿ ಒಟ್ಟು 732 ಮಂದಿ ಬಿಡುಗಡೆಯಾಗಿದ್ದರೆ, ಒಟ್ಟು 31 ಸಾವಾಗಿದೆ ಎಂದು ರಾಜ್ಯ ಬುಲೆಟಿನ್ ಹೇಳಿದೆ. ಅದರ ಪ್ರಕಾರ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1075.
DAKSHINA KANNADA DISTRICT: ಪ್ರತಿ ಬಾರಿಯೂ ಕೊರೊನಾ ಪ್ರಕರಣಗಳು ಬಂದಾಗಲೆಲ್ಲಾ ಗುಣವಾದವರ ಸಂಖ್ಯೆಯನ್ನು ಗಮನಿಸಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1848. ಗುಣಮುಖರಾದವರು 753. ಚಿಕಿತ್ಸೆ ಪಡೆಯುತ್ತಿರುವವರು 1057 ಮಂದಿ. ಒಟ್ಟು 22,585 ಮಂದಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷಿಸಲಾಗಿದ್ದು, ಅವರಲ್ಲಿ 20,737 ಮಂದಿಗೆ ಕೊರೊನಾ ಸೋಂಕು ಇಲ್ಲ. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ದಕ್ಷಿಣ ಕನ್ನಡ ಜಿಲ್ಲಾಡಳಿತ ಹೊರಡಿಸಿದ ಪ್ರಕಟಣೆಯ ಪ್ರಕಾರ, ಇಂದು 139 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 8 ಮಂದಿ ಸಾವಿಗೀಡಾಗಿದ್ದು, ಸಾವಿನ ಕಾರಣ ನಿರ್ಧರಿಸಲು ಜಿಲ್ಲಾ ತಜ್ಞರ ಸಮಿತಿ ಪರಿಶೀಲನೆ ನಡೆಸುತ್ತಿದೆ ಎಂದಿದೆ. ಕೊರೊನಾಕ್ಕೆ ಸಂಬಂಧಿಸಿ, ಬಂಟ್ವಾಳ ತಾಲೂಕಿನಲ್ಲಿ ಶುಕ್ರವಾರ ಒಂದೇ ದಿನ 24 ಪ್ರಕರಣಗಳು ದೃಢಪಟ್ಟಿವೆ. ಪುದು ಗ್ರಾಮವೊಂದರಲ್ಲಿ 16 ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ ಮಕ್ಕಳು, ವಯಸ್ಸಾದವರು ಇದ್ದಾರೆ.
ರೋಗಲಕ್ಷಣ ಇಲ್ದಿದ್ರೂ ಕೊರೊನಾ ಪಾಸಿಟಿವ್ ಬರ್ತದೆ, ನಾವು ಏನು ಮಾಡಬೇಕು? ತಜ್ಞ ವೈದ್ಯ ಡಾ. ಚಕ್ರಪಾಣಿ ಹೀಗೆ ಹೇಳ್ತಾರೆ
Be the first to comment on "KARNATAKA COVID19 UPDATE: ಇಂದು 57 ಸಾವು, 2313 ಮಂದಿಗೆ ಸೋಂಕು. 1003 ಮಂದಿ ಗುಣಮುಖ"