ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಯುವಕೇಸರಿ ಗಡಿಯಾರ ಸಂಘಟನೆಯ ಯುವಕರು ಬನ್ನಿ ವಿಕೃತಿಯಿಂದ ಸಂಸ್ಕೃತಿಯ ಕಡೆಗೆ ಎನ್ನುವ ಘೋಷವಾಕ್ಯ ದೊಂದಿಗೆ ಮುನ್ನಡೆಯುತ್ತಿದ್ದು, ಇದೀಗ ಸ್ವದೇಶಿ ವಸ್ತುಗಳ ಪಟ್ಟಿಯನ್ನು ಹೊರಡಿಸಿದೆ. ಇತ್ತೀಚೆಗಷ್ಟೆ ಚೀನಾ ದೇಶವು ನಮ್ಮ 21 ಸೈನಿಕರನ್ನು ಬಲಿ ತೆಗೆದುಕೊಂಡಿತು. ಅದರ ವಿರುದ್ದವಾಗಿ ಇಡೀ ಭಾರತವೇ ಚೀನಿ ವಸ್ತುಗಳನ್ನು ಬಹಿಷ್ಕರಿಸುವುದರ ಮೂಲಕ ದುಷ್ಟ ಚೀನಾಕ್ಕೆ ಪಾಟ ಕಲಿಸುತ್ತಿದೆ. ಹಲ್ಲುಜ್ಜುವ ಬ್ರೆಶ್, ಪೇಸ್ಟ್, ಸೋಪು,ಸೋಪು ಹುಡಿ,ಶಾಂಪು,ರೇಸರ್,ಹೀಗೆ ವಿದೇಶಿ ವಸ್ತುಗಳು ನಮ್ಮ ಮನೆ ಸೇರದಂತೆ ಜಾಗೃತಿಗೊಳಿಸುವ ಪ್ರಯತ್ನವಾಗಿದಿನೋಪಯೋಗಿ ಸ್ವದೇಶಿ ವಸ್ತುಗಳ ಪಟ್ಟಿಯನ್ನು ಯುವಕೇಸರಿ ಗಡಿಯಾರ ಸಂಘಟನೆಯು ಹೊರಡಿಸಿದೆ. ಈ ಸ್ವದೇಶಿ ವಸ್ತುಗಳ ಪಟ್ಟಿಯನ್ನು ಶನಿವಾರ ದೇಂತಡ್ಕ ವನದುರ್ಗಾದೇವಿಯ ಸನ್ನಿಧಿಯಲ್ಲಿ ಗಣ್ಯರ ಸಮಕ್ಷಮ ಸಾಂಕೇತಿಕವಾಗಿ ಬಿಡುಗಡೆಗೊಳಿಸಲಾಯಿತು ಎಂದು ಕೆದಿಲ ಗಣರಾಜ ಭಟ್ ತಿಳಿಸಿದ್ದಾರೆ.
Be the first to comment on "ಯುವಕೇಸರಿ ಗಡಿಯಾರ ಸಂಘಟನೆಯಿಂದ ಸ್ವದೇಶಿ ಉತ್ಪನ್ನ ಬಳಸಿ, ದೇಶ ಉಳಿಸಿ ಆಂದೋಲನ"