ಬಂಟ್ವಾಳ ತಾಲೂಕಿನ ಒಂದು ಪ್ರಕರಣವೂ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 44 ಮಂದಿಗೆ ಕೊರೊನಾ ಪಾಸಿಟಿವ್ ಸೋಂಕು ದೃಢಪಟ್ಟಿದೆ. ಇಂದು ಲಭ್ಯವಾದ 148 ಮಂದಿಯ ಸ್ಯಾಂಪಲ್ ನಲ್ಲಿ 44 ಪಾಸಿಟಿವ್ ಕಂಡುಬಂತು. ಇಂದು 316 ಮಂದಿಯ ಗಂಟಲು ದ್ರವ ಮಾದರಿಯನ್ನು ಕೊಂಡೊಯ್ಯಲಾಗಿದೆ. 325 ಮಂದಿಯ ಸ್ಯಾಂಪಲ್ ವರದಿ ಬರಲು ಬಾಕಿ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 749 ಪಾಸಿಟಿವ್ ಪ್ರಕರಣಗಳು ಗೊತ್ತಾದಂತಾಗಿದೆ. 292 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 443 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು 17 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಬಂಟ್ವಾಳ ಕೈಕಂಬ ಬಳಿಯ ಕ್ಲಿನಿಕ್ ಇರುವ ವೈದ್ಯರೋರ್ವರಿಗೆ ಪಾಸಿಟಿವ್ ದೃಢಪಟ್ಟಿದೆ. ಅವರ ಮನೆ, ಕ್ಲಿನಿಕ್ ಅನ್ನು ಸೀಲ್ ಡೌನ್ ಮಾಡಲಾಗಿದ್ದು, ಅಲ್ಲಿ ಪುರಸಭೆಯವರು ಸ್ಯಾನಿಟೈಸ್ ಮಾಡಿದ್ದಾರೆ.
Be the first to comment on "ದಕ್ಷಿಣ ಕನ್ನಡದಲ್ಲಿ ಇಂದು 44 ಮಂದಿಗೆ ಕೊರೊನಾ ಪಾಸಿಟಿವ್"