ಬಂಟ್ವಾಳ: ಕೋವಿಡ್ ಹಿನ್ನೆಲೆಯಲ್ಲಿ ಲಾಕ್ ಡೌನ್ ನಿಂದಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾದ ವಕೀಲ ಸಮುದಾಯಕ್ಕೆ ಆರ್ಥಿಕ ಸಹಾಯ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ವೇದಿಕೆಯಿಂದ ಬಂಟ್ವಾಳ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಕಾನೂನು ವೇದಿಕೆ (ರಿ) ಮಂಗಳೂರು ಜಿಲ್ಲಾಧ್ಯಕ್ಷ ಎಸ್.ಪಿ.ಚಂಗಪ್ಪ, ಉಪಾಧ್ಯಕ್ಷರಾದ ಉಮೇಶ್ ಕುಮಾರ್ ವೈ, ಪ್ರಧಾನ ಕಾರ್ಯದರ್ಶಿ ಉದನೇಶ್ವರ ಬಿ, ಸಂಘಟನಾ ಕಾರ್ಯದರ್ಶಿ ವೀರೇಂದ್ರ ಎಂ.ಸಿದ್ಧಕಟ್ಟೆ, ಬಂಟ್ವಾಳ ಘಟಕ ಅಧ್ಯಕ್ಷ ಸುರೇಶ್ ಪೂಜಾರಿ, ಕಾರ್ಯದರ್ಶಿ ರವೀಂದ್ರ ಕುಕ್ಕಾಜೆ, ಜತೆಕಾರ್ಯದರ್ಶಿ ತುಲಸೀದಾಸ್, ಮೋಹನ್ ಕಡೇಶ್ವಾಲ್ಯ, ಕಾರ್ಯಕಾರಿ ಸಮಿತಿ ಸದಸ್ಯ ಬಿ.ವಿ. ಶೆಣೈ, ಬಂಟ್ವಾಳದ ವಕೀಲರ ಸಂಘದ ಸದಸ್ಯರು ಸೋಮವಾರ ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ಮನವಿ ಸಲ್ಲಿಸಿದರು. ಬ್ಯಾಂಕುಗಳ ಮೂಲಕ ಕನಿಷ್ಠ ಬಡ್ಡಿಯ ಸಾಲ ಬಿಡುಗಡೆ, ಯುವ ವಕೀಲರಿಗೆ ಕೊಡುವ ಪ್ರೋತ್ಸಾಹಧನ ಏರಿಕೆ, ನ್ಯಾಯಾಂಗ ಬಂಧನದಲ್ಲಿರುವ ಕೈದಿಗಳಿಗೆ ಕಡ್ಡಾಯ ಕೋವಿಡ್ ಟೆಸ್ಟ್, ಅವರ ಕುಟುಂಬಸ್ಥರ ಭೇಟಿಗೆ ಅವಕಾಶ ಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
Be the first to comment on "ಆರ್ಥಿಕ ಸಂಕಷ್ಟಕ್ಕೊಳಗಾದ ವಕೀಲರಿಗೆ ನೆರವು ನೀಡುವಂತೆ ಸಿಎಂಗೆ ಒತ್ತಾಯ: ಬಂಟ್ವಾಳದಲ್ಲಿ ದ.ಕ.ಜಿಲ್ಲಾ ಕಾನೂನು ವೇದಿಕೆಯಿಂದ ಮನವಿಯರ್ಪಣೆ"