www.bantwalnews.com Editor: Harish Mambady For Advertisements contact: 9448548127
ವಿಡಿಯೋ:
ಬಂಟ್ವಾಳ ತಾಲೂಕು ಸೇರಿದಂತೆ ದಕ್ಷಿಣ ಕನ್ನಡದಾದ್ಯಂತ ಶನಿವಾರದಿಂದೀಚೆಗೆ ಧಾರಾಕಾರ ಮಳೆಯಾಗುತ್ತಿದ್ದು, ವಾತಾವರಣ ಸಂಪೂರ್ಣ ತಂಪಾಗಿದೆ. ಇದೇ ವೇಳೆ ನೇತ್ರಾವತಿ ನದಿ ನೀರಿನಲ್ಲಿ ಕೊಂಚ ಏರಿಕೆಯೂ ಕಂಡುಬಂದಿದೆ. ಮಳೆಯಿಂದಾಗಿ ಅಪೂರ್ಣಗೊಂಡ ರಸ್ತೆ ಕಾಮಗಾರಿಗಳು ವಾಹನ ಸವಾರರಿಗಷ್ಟೇ ಅಲ್ಲ, ರಸ್ತೆ ಬದಿಯಲ್ಲಿರುವ ಮನೆಗಳಲ್ಲಿ ವಾಸಿಸುವವರಿಗೂ ದಃಸ್ವಪ್ನವಾಗಿ ಕಾಡತೊಡಗಿದೆ. ಉದಾಹರಣೆಗೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಬಂಟ್ವಾಳದಿಂದ ಪುಂಜಾಲಕಟ್ಟೆವರೆಗೆ ಸಾಗುವ ರಸ್ತೆ ಅಭಿವೃದ್ಧಿಯಲ್ಲಿ ಬಿ.ಸಿ.ರೋಡ್ ನಿಂದ ಜಕ್ರಿಬೆಟ್ಟುವರೆಗಿನ ಕೆಲಸಗಳು ಸಂಪೂರ್ಣವಾಗದ ಕಾರಣ, ಈ ಭಾಗದಲ್ಲಿ ಸಂಚರಿಸುವವರೀಗ ತೊಂದರೆ ಅನುಭವಿಸಬೇಕಾಗಿದೆ.
ಜಕ್ರಿಬೆಟ್ಟುವರೆಗಿನ ಚತುಷ್ಪಥ ಹೆದ್ದಾರಿಯ ಒಂದು ಬದಿಯ 7 ಮೀ. ರಸ್ತೆಯನ್ನು ಮಾಸಾಂತ್ಯ ದೊಳಗೆ ಮುಗಿಸಿ, ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಿದ್ದೇವೆ. ಬಳಿಕ ಮತ್ತೊಂದು ಬದಿಯ ಕಾಮಗಾರಿ ಮುಂದುವರಿಸುತ್ತೇವೆ ಎಂದು ಎಇಇ ರಮೇಶ್ ಹೇಳುತ್ತಾರೆ. ಆದರೆ ಒಂದೆಡೆ ಧಾರಾಕಾರ ಮಳೆ ಸುರಿಯುತ್ತಿದ್ದು, ರಸ್ತೆಯನ್ನು ಮತ್ತಷ್ಟು ಹದಗೆಡಿಸಿದೆ.
Be the first to comment on "ಧಾರಾಕಾರ ಮಳೆ ಶುರು: ಹೆದ್ದಾರಿ ಕಾಮಗಾರಿ ಕಷ್ಟ, ವಾಹನ ಸವಾರರು, ರಸ್ತೆ ಪಕ್ಕದ ನಿವಾಸಿಗಳಿಗೆ ಸಂಕಷ್ಟ"