
ಭಕ್ತರಿಗೆ ಸಾಮಾಜಿಕ ಅಂತರಕ್ಕಾಗಿ ಕಾಪಾಡಲು ಹಾಕಿದ ಮಾರ್ಕ್ ನಲ್ಲಿ ಕೋತಿಗಳು ಕುಳಿತ ಫೊಟೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇತಿಹಾಸಪ್ರಸಿದ್ಧ ಕಾರಿಂಜ ಕ್ಷೇತ್ರದಲ್ಲಿ ಭಕ್ತರು ಸಾಲಿನಲ್ಲಿ ನಿಂತುಕೊಳ್ಳಲೆಂದು ಮಾರ್ಕ್ ಮಾಡಿದ್ದನ್ನು ಕೋತಿಗಳೂ ಪಾಲಿಸುತ್ತಿವೆ ಎಂಬ ಸಂದೇಶವುಳ್ಳ ಫೊಟೋ ಒಂದು ಸಾಮಾಜಿಕ ಜಾಲತಾಣದಲ್ಲೀಗ ಪ್ರಸಿದ್ಧಿ ಪಡೆಯುತ್ತಿದೆ. ಸಾಮಾಜಿಕ ಅಂತರವನ್ನು ಕಾಪಾಡುವುದರ ಬಗ್ಗೆ ಮನುಷ್ಯರೇ ನಿರ್ಲಕ್ಷ್ಯ ತೋರುತ್ತಾರೆ. ಕೊರೊನಾ ಬಂದರೆ ಬರಲಿ ಎಂದು ಹೇಳುತ್ತಾರೆ, ಆದರೆ ಕಾರಿಂಜದ ವಾನರರು ಹಾಗಲ್ಲ. ಶಿಸ್ತಿನ ಸಿಪಾಯಿಗಳಂತೆ ಇವುಗಳು ಸೂಚಿತ ಜಾಗದಲ್ಲಿ ಹಾಕಿದ ಆಹಾರವನ್ನು ಸೇವಿಸುತ್ತಿರುವ ದೃಶ್ಯವೀಗ ನಿಯಮ ಉಲ್ಲಂಘಿಸುವವರಿಗೆ ಪಾಠ ಹೇಳುವಂತಿದೆ.
Be the first to comment on "ವಾನರರಿಗೂ ಗೊತ್ತು, ಸಾಮಾಜಿಕ ಅಂತರದ ಮಹತ್ವ"