ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬಂಟ್ವಾಳದ ವಿದ್ಯಾಗಿರಿಯಲ್ಲಿರುವ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆಯ ಶಿಕ್ಷಕರು ಹಲವು ರೀತಿ ಕಾರ್ಯಕ್ರಮಗಳನ್ನು ಆಯೋಜಿಸಿದರು. ಶಾಲೆಯ ಆವರಣದಲ್ಲಿ ಐವತ್ತಕ್ಕೂ ಹೆಚ್ಚು ಔಷಧೀಯ ಸಸ್ಯಗಳನ್ನು ಬೆಳೆಸಲಾಗಿದ್ದು, ಶಿಕ್ಷಕರು ಪ್ರತೀ ಸಸ್ಯಗಳ ಔಷಧೀಯ ಗುಣಗಳನ್ನು ಇತರರೊಂದಿಗೆ ಹಂಚಿಕೊಂಡರು. ಗೈಡ್ಸ್ ಶಿಕ್ಷಕಿ ಕೇಶವತಿ ಪ್ರತಿಜ್ಞಾವಿಧಿ ನೆರವೇರಿಸಿದರು. ಚಿತ್ರಕಲಾ ಶಿಕ್ಷಕ ಹರೀಶ್ ಹಾಗೂ ಯೋಗಿನಿ ಅವರು ತುಳಸಿ, ನೆಲ್ಲಿ, ನೆಗ್ಗಿನ ಗಿಡ, ತುಂಬೆ, ಕಹಿಬೇವು, ಆಡುಸೋಗೆ, ಪುನರ್ಪುಳಿ, ಅಮೃತಬಳ್ಳಿ, ಉತ್ತರಾಣಿ, ಮುಟ್ಟಿದರೆಮುನಿ ಮುಂತಾದ ಸಸ್ಯಗಳನ್ನು ಔಷಧೀಯವಾಗಿ ಬಳಸುವ ರೀತಿಯನ್ನು ವಿವರಿಸಿದರು. ಪರಿಸರದ ಕುರಿತಾದ ಲೇಖನ, ಘೋಷವಾಕ್ಯ, ಪರಿಸರಗೀತೆ, ಪ್ರಹಸನ, ನೃತ್ಯ ಹಾಗೂ ಸ್ವರಚಿತ ಕವನ ವಾಚನಗಳನ್ನು ಶಿಕ್ಷಕರು ಪ್ರಸ್ತುತಪಡಿಸಿದರು. ಪ್ರಿನ್ಸಿಪಾಲ್ ರಮಾಶಂಕರ್ ಪರಿಸರದ ಸಮತೋಲನವನ್ನು ಕಾಪಾಡುವ ವಿಚಾರದ ಕುರಿತು ಮಾತನಾಡಿದರು. ಶಿಕ್ಷಕ–ರಕ್ಷಕ ಸಂಘದ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ ಮಾತನಾಡಿ ಪರಿಸರವನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಅಕ್ಷಿತಾ ಹಾಗೂ ಶ್ರುತಿಕಾ ನಿರೂಪಿಸಿದರು. ಜೂಲಿಯಾನಾ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಬಿಆರ್ ಎಂಪಿ ಶಾಲೆಯಲ್ಲಿ ಪರಿಸರ ದಿನಾಚರಣೆ"