ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 2 ವರ್ಷದ ಮಗು ಸೇರಿದಂತೆ ಒಟ್ಟು 24 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇವರೆಲ್ಲರೂ ಹೊರರಾಜ್ಯದಿಂದ ಬಂದವರು. ಇಂದು 113 ಮಂದಿಯ ಫಲಿತಾಂಶ ಬಂದಿದ್ದರೆ, 58 ಮಂದಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿದೆ. 1004 ಮಂದಿಯ ಫಲಿತಾಂಶ ಬರಲು ಬಾಕಿ ಇದೆ. ಇಂದು 10 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಜಿಲ್ಲೆಯ ಲೆಕ್ಕ ಹೀಗಿದೆ. 105 ಪಾಸಿಟಿವ್. ಅವುಗಳ ಪೈಕಿ 99 ಜಿಲ್ಲೆಯದ್ದೇ ಪ್ರಕರಣಗಳು. ಚಿಕಿತ್ಸೆ ಪಡೆಯುತ್ತಿರುವವರು 59. ಡಿಸ್ಚಾರ್ಜ್ ಆದವರು 39. 7 ಮಂದಿ ಸಾವನ್ನಪ್ಪಿದವರು.
ಇಂದು 24 ಮಂದಿಗೆ ಪಾಸಿಟಿವ್ ಬಂದಿದ್ದು, ಅವರ ಪೈಕಿ 61 ವರ್ಷದ ಪುರುಷ, 62 ವರ್ಷದ ಮಹಿಳೆ, 50 ವರ್ಷದ ಪುರುಷ, 23 ವರ್ಷದ ಪುರುಷ, 36 ವರ್ಷದ ಪುರುಷ, 18 ವರ್ಷದ ಯುವತಿ, 43, 40, 36, 23, 42 ವರ್ಷದ ಪುರುಷರು, 31 ವರ್ಷದ ಮಹಿಳೆ, 2 ವರ್ಷದ ಮಗು, 20 ವರ್ಷದ ಪುರುಷ, 20, 35, 47, 36, 48 ವರ್ಷದ ಪುರುಷರು, 25 ವರ್ಷದ ಮಹಿಳೆ, 60 ವರ್ಷದ ಪುರುಷ, 30 ವರ್ಷದ ಮಹಿಳೆ, 65 ವರ್ಷದ ಪುರುಷ, 29 ವರ್ಷದ ಪುರುಷ ಸೇರಿದ್ದಾರೆ.
Be the first to comment on "ದಕ್ಷಿಣ ಕನ್ನಡ: 1004 ಮಂದಿಯ ಕೋವಿಡ್ ಪರೀಕ್ಷಾ ಫಲಿತಾಂಶ ಬರಲು ಬಾಕಿ"