ಬಂಟ್ವಾಳ: ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (ಸಿಡಿಪಿಒ)ಯ ಬಂಟ್ವಾಳದ ಅಧಿಕಾರಿಗಳು ಬಂಟ್ವಾಳ ತಾಲೂಕಿನ ಮೇಲ್ಕಾರ್ ಜಂಕ್ಷನ್ ಮತ್ತು ಮಾರ್ನಬೈಲ್ ಪಣೋಲಿಬೈಲ್ ಜಂಕ್ಷನ್ ಸ್ಥಳದಲ್ಲಿ ಗುರುವಾರ ಮಾಸ್ಕ್ ಇಲ್ಲದೆ ಸಂಚರಿಸುತ್ತಿದ್ದ ವಾಹನಗಳಲ್ಲಿರುವವರಿಗೆ ಉಚಿತವಾಗಿ ಮಾಸ್ಕ್ ವಿತರಿಸಿ, ಮಾಸ್ಕ್ ನ ಅಗತ್ಯ ಕುರಿತು ವಿವರಿಸಿದರು.
ಪಣೋಲಿಬೈಲ್ ಅಂಗನವಾಡಿ ಕಾರ್ಯಕರ್ತೆಯರಾದ ವಿನಯ ನಗ್ರಿ, ವಿಜಯಾ, ಬೊಂಡಾಲ ಕಾರ್ಯಕರ್ತೆ ವೀಣಾ ಸೇರಿ ಒಟ್ಟು 600 ಮಾಸ್ಕ್ ಗಳನ್ನು ಸಿದ್ಧಪಡಿಸಿದ್ದರು. ಇಲಾಖೆಯ ಶಿಶು ಅಭಿವೃದ್ಧಿ ಅಧಿಕಾರಿಯಾದ ಗಾಯತ್ರಿ ಬಾಯಿ ಎಚ್, ಹಿರಿಯ ಮೇಲ್ವಿಚಾರಕಿಯಾದ ಬಿ. ಭಾರತಿ, ಸಜಿಪ ಮೂಡ ಪಂಚಾಯತ್ ಅಧ್ಯಕ್ಷ ವಿಶ್ವನಾಥ ಬೆಲ್ಚಡ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿರ್ಮಲ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಸ್ತ್ರೀಶಕ್ತಿ ಗುಂಪಿನ ಸದಸ್ಯರು ಹಾಜರಿದ್ದರು.
Be the first to comment on "ಮೇಲ್ಕಾರ್, ಮಾರ್ನಬೈಲ್: ಸಿಡಿಪಿಒ ಅಧಿಕಾರಿಗಳಿಂದ ವಾಹನ ಸವಾರರಿಗೆ ಮಾಸ್ಕ್"