ಬಹುಜನರ ಬೇಡಿಕೆಯ ಮೇರೆಗೆ ಷರತ್ತುಗಳಿಗೆ ಒಳಪಟ್ಟು ಮುಕ್ತ ಸಂಚಾರಕ್ಕೆ ಅವಕಾಶ ಕೊಡುವ ಹೊತ್ತಿನಲ್ಲಿಯೇ ರಾಜ್ಯದಲ್ಲಿ ಸೋಮವಾರ 99 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಹೆಚ್ಚಿನ ಪ್ರಕರಣಗಳು ಅನ್ಯರಾಜ್ಯ, ದೇಶದಿಂದ ಆಗಮಿಸಿದವರಲ್ಲಿ ಇದೆ.
ದಕ್ಷಿಣ ಕನ್ನಡ ಜಿಲ್ಲೆಯ 30 ವರ್ಷದ ಯುವಕ ಮತ್ತು 55 ವರ್ಷದ ಮಹಿಳೆಗೆ ಸೋಂಕು ತಗಲಿದೆ. 30 ವರ್ಷದ ಯುವಕ ಅಂತಾರಾಜ್ಯ ಪ್ರಯಾಣದ ಹಿನ್ನೆಲೆಯಲ್ಲಿ ಸೋಂಕು ತಗಲಿದ್ದು, ಈತ ರಾಯಘಡ ಮಹಾರಾಷ್ಟ್ರದಿಂದ ಆಗಮಿಸಿದ್ದಾರೆ. ಮಹಿಳೆಗೆ ತೀವ್ರ ಉಸಿರಾಟದ ತೊಂದರೆ ಇದ್ದು, ಇವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಅದೇ ರೀತಿ ಉಡುಪಿ ಜಿಲ್ಲೆಯಲ್ಲಿ 28 ವರ್ಷದ ಮಹಿಳೆ ಮುಂಬೈನಿಂದ ಆಗಮಿಸಿದ್ದು, ಇವರಿಗೆ ಸೋಂಕು ತಗಲಿದೆ. ಇವರ ಪೈಕಿ ಯುವಕ ಮೂಲತಃ ಬಂಟ್ವಾಳ ತಾಲೂಕಿನ ಕರೋಪಾಡಿಯವರು, ಮಹಾರಾಷ್ಟ್ರದಿಂದ ಬಂದು ಕ್ವಾರಂಟೈನ್ ನಲ್ಲಿದ್ದವರು. ಮಹಿಳೆ ಮಂಗಳೂರಿನ ಯೆಯ್ಯಾಡಿಯವರು.
ಕರ್ನಾಟಕದ ಸ್ಥಿತಿ:
- ಕರ್ನಾಟಕದಲ್ಲಿ ಇಂದು 99 ಸೋಂಕಿತರು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1246ಕ್ಕೆ ಏರಿಕೆಯಾಗಿದೆ.
- ಬೆಂಗಳೂರು 24, ಮಂಡ್ಯ 17,ಕಲಬುರ್ಗಿ 11, ಉತ್ತರಕನ್ನಡ 8, ರಾಯಚೂರು 6, ಗದಗ 5, ಯಾದಗಿರಿ 5, ವಿಜಯಪುರ 5,ಹಾಸನ 4, ಕೊಪ್ಪಳ 3,ಬೆಳಗಾವಿ 2, ದಕ್ಷಿಣಕನ್ನಡ 2,ಮೈಸೂರು 1, ಕೊಡಗು 1,ಬಳ್ಳಾರಿ 1, ದಾವಣಗೆರೆ 1,ಬೀದರ್ 1 ಉತ್ತರಕನ್ನಡ 1,ಉಡುಪಿ 1.
- ಒಟ್ಟು ಹೊಸ ಪ್ರಕರಣಗಳು 99. ಚಿಕಿತ್ಸೆ ಪಡೆಯುತ್ತಿರುವವರು 678. ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವವರು 530. ಮೃತಪಟ್ಟವರು 37. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರು 12.
ಹೆಚ್ಚಿನ ಸುದ್ದಿಗಳಿಗೆ ಈ ಗ್ರೂಪ್ ಸೇರಬಹುದು. ಕ್ಲಿಕ್ ಮಾಡಿರಿ
Be the first to comment on "NEWS ALERT: ಒಂದೆಡೆ ಮುಕ್ತ ಸಂಚಾರಕ್ಕೆ ಅವಕಾಶ, ಮತ್ತೊಂದೆಡೆ ಕೊರೊನಾ ಕೇಸುಗಳ ಹೆಚ್ಚಳ"