ರಾಜ್ಯ, ಜಿಲ್ಲೆಯ ವಿಷಯವೇನು? ಕ್ಲಿಕ್ ಮಾಡಿ ಓದಿರಿ
ಕರ್ನಾಟಕದಲ್ಲಿ ಗುರುವಾರ ಒಟ್ಟು 28 ಮಂದಿಗೆ ಸೋಂಕು ದೃಢಪಟ್ಟಿದೆ. ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದಲ್ಲಿ ಇಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 987ಕ್ಕೆ ಏರಿದ್ದರೆ, ಸಾವಿನ ಸಂಖ್ಯೆ 35 ಆಗಿದೆ. ನಮ್ಮ ರಾಜ್ಯದಲ್ಲಿ ಬೆಂಗಳೂರು 5, ಮಂಡ್ಯ 5, ಗದಗ 4, ಬೀದರ್ 7, ದಾವಣಗೆರೆ 3, ಕಲಬುರ್ಗಿ 2, ಬಾಗಲಕೋಟೆ 1, ಬೆಳಗಾವಿ 1 ಸೋಂಕು ದೃಢಪಟ್ಟವರು. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಧಿಕ ರಕ್ತದೊತ್ತಡ ಮತ್ತು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ 80 ವರ್ಷದ ಕುಲಶೇಖರ ನಿವಾಸಿ ಮಹಿಳೆಗೆ ಏ.26ರಂದು ಸೋಂಕು ದೃಢಪಟ್ಟಿತ್ತು. ಅವರನ್ನು ವೆನ್ಲಾಕ್ ಗೆ ದಾಖಲಿಸಲಾಗಿತ್ತು. ಅವರ ಎಕ್ಸ್ ರೇ ತಪಾಸಣೆಯಲ್ಲಿ ಶ್ವಾಸಕೋಶದಲ್ಲಿ ನ್ಯುಮೋನಿಯಾ ಲಕ್ಷಣಗಳು ಕಂಡುಬಂದಿರುವುದಿಲ್ಲ. ಅವರು ಆಂತರಿಕ ರಕ್ತಸ್ರಾವದಿಂದ ಬಳಲಿ, ಚಿಕಿತ್ಸೆಗೆ ಸ್ಪಂದಿಸದೆ ಮೇ.14ರಂದು ಬೆಳಗ್ಗೆ 5.30ಕ್ಕೆ ನಿಧನ ಹೊಂದಿದ್ದಾರೆ. ಅವರ ಗಂಟಲು ದ್ರವ ಮಾದರಿ ಪರೀಕ್ಷೆಗೆ ಮೇ.13ರಂದು ತೆಗೆಯಲಾಗಿದ್ದು, ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಅಧೀಕ್ಷಕರು ವರದಿ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮತ್ತೋರ್ವ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ 60 ವರ್ಷದ ಪುರುಷ ನಿಧನ ಹೊಂದಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಇದು ಕರ್ನಾಟಕದ ವಿಷಯವಾದರೆ, ನೆರೆಯ ಕೇರಳದಲ್ಲೂ ಇಂದು 26 ಹೊಸ ಪ್ರಕರಣಗಳು ದಾಖಲಾಗಿವೆ. ಕೇರಳದಲ್ಲಿ ಒಟ್ಟು 560 ಪ್ರಕರಣಗಳು ದಾಖಲಾದಂತಾಗಿದೆ. ಕಾಸರಗೋಡಿನಲ್ಲೇ ಇವತ್ತು 10 ಹೊಸ ಕೇಸ್ ಗಳು ಬಂದಿದ್ದು, ಒಟ್ಟು 14 ಪ್ರಕರಣಗಳು ಕಾಸರಗೋಡು ಒಂದು ಜಿಲ್ಲೆಯಲ್ಲೇ ಇದೆ. ಎಲ್ಲ ಮುಗಿಯಿತು ಎಂದು ಸಮಾಧಾನಪಟ್ಟುಕೊಂಡಿದ್ದ ನೆರೆಯ ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಗೆ ಸಂಬಂಧಿಸಿದ ಆಘಾತಕಾರಿ ಸುದ್ದಿಗಳು ಬರುತ್ತಿರುವ ಕಾರಣ ಜನರು ಮತ್ತಷ್ಟು ನಿಯಮಗಳನ್ನು ಪಾಲಿಸಿಕೊಂಡು ತಮ್ಮ ಜಾಗ್ರತೆಯಲ್ಲಿ ಇರುವುದು ಒಳಿತು.
Be the first to comment on "ಕರ್ನಾಟಕದಲ್ಲಿ 28 ಮಂದಿಗೆ ಕೊರೊನಾ ಪಾಸಿಟಿವ್, ದ.ಕ ಸೇರಿ 2 ಸಾವು, ನೆರೆಯ ಕಾಸರಗೋಡಲ್ಲಿ ಮತ್ತೆ 10 ಕೇಸ್"