ಜಿಲ್ಲೆಯ ವಿವರ ಹೀಗಿದೆ:
ಸೋಮವಾಋ 124 ಮಂದಿಯ ವರದಿಗಳು ಬಂದಿದ್ದು ಎಲ್ಲವೂ ನೆಗೆಟಿವ್ ಆಗಿದೆ. 68 ಮಂದಿಯ ವರದಿಯನ್ನು ಕಳಿಸಲಾಗಿದೆ. ಒಟ್ಟು 128 ಮಂದಿ ವರದಿ ಬರಲು ಬಾಕಿ ಇದೆ. ದಕ್ಷಿಣ ಕನ್ನಡ ಜಿಲ್ಲೆಯ 14 ಮಂದಿ ಇದುವರೆಗೆ ಗುಣಮುಖರಾಗಿದ್ದಾರೆ. 3 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 31 ಪಾಸಿಟಿವ್ ಪ್ರಕರಣಗಳು ಇದುವರೆಗೆ ಬಂದಿದ್ದು, ಇವರ ಪೈಕಿ 6 ಮಂದಿ ಅನ್ಯರಾಜ್ಯ, ಜಿಲ್ಲೆಯವರು.
ರಾಜ್ಯದ ವಿವರ ಹೀಗಿದೆ:
ರಾಜ್ಯದಲ್ಲಿ ಒಟ್ಟು 14 ಸೋಂಕಿತರು ಇವತ್ತು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 862ಕ್ಕೆ ಏರಿದೆ. ಹೊಸ ಜಾಗಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗುತ್ತಿರುವುದು ಆತಂಕಕಾರಿವಿಷಯ. ವಿವರ ಹೀಗಿದೆ. ದಾವಣಗೆರೆ 03, ಬಾಗಲಕೋಟೆ 02,ಬೀದರ್ 02, ಬೆಂಗಳೂರು 02, ಹಾವೇರಿ 01, ಕಲಬುರ್ಗಿ 01, ವಿಜಯಪುರ 01, ಹಾಸನ 01, ಮಂಡ್ಯ 01
ಬಂಟ್ವಾಳ ತಾಲೂಕಿನ ವಿವರ ಹೀಗಿದೆ:
ಬಂಟ್ವಾಳ ತಾಲೂಕಿನಲ್ಲಿ ಒಟ್ಟು ಸೋಂಕಿತರ ಪೈಕಿ 3 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. 3 ಮಂದಿ ಮೃತಪಟ್ಟಿದ್ದಾರೆ. ಒಂದು ಮನೆಯ 4, ಮತ್ತೊಂದು ಮನೆಯ 1 ಸೇರಿ ಬಂಟ್ವಾಳದಲ್ಲಿ 5 ಮಂದಿ, ನರಿಕೊಂಬಿನ ಒಬ್ಬರು ಒಟ್ಟು 6 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇತರ ಸುದ್ದಿಗಳಿಗೆ ಈ ವಾಟ್ಸಾಪ್ ಗುಂಪಿಗೆ ಸೇರಬಹುದು. ಕ್ಲಿಕ್ ಮಾಡಿ ಸೇರಿ
Be the first to comment on "ಬಂಟ್ವಾಳದ ಮಹಿಳೆ ಡಿಸ್ಚಾರ್ಜ್, ಇವತ್ತು ದ.ಕ.ಜಿಲ್ಲೆಯಲ್ಲಿ ಯಾವುದೇ ಕೋವಿಡ್ ಪ್ರಕರಣವಿಲ್ಲ"