ಕರ್ನಾಟಕದಲ್ಲಿ ಬುಧವಾರ ಬೆಳಗ್ಗೆ 12 ಗಂಟೆಗೆ ಪ್ರಕಟವಾದ ವರದಿಯಂತೆ ಒಟ್ಟು 19 ಕೊರೊನಾ ಸೋಂಕಿತರ ಪತ್ತೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 692ಕ್ಕೆ ಏರಿಕೆಯಾಗಿದೆ. ಬಾಗಲಕೋಟೆ 13, ದಕ್ಷಿಣಕನ್ನಡ 3, ಬೆಂಗಳೂರು 2 ಕಲಬುರ್ಗಿ 1 ಪ್ರಕರಣ ಇದರಲ್ಲಿ ಸೇರಿವೆ.
ಬಂಟ್ವಾಳದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾಗೆ ಮೊದಲು ಬಲಿಯಾದ ಮಹಿಳೆಯ ಸಂಪರ್ಕದಿಂದ 16 ವರ್ಷದ ಬಾಲಕಿ ಸಹಿತ ಮೂರು ಮಂದಿಗೆ ಕೊರೊನಾ ಸೊಂಕು ಪತ್ತೆಯಾಗಿರುವುದು ಆಘಾತಕಾರಿ ಸಂಗತಿ.
ಮಂಗಳೂರಿನ 11 ವರ್ಷದ ಬಾಲಕಿ, 35 ವರ್ಷದ ಮಹಿಳೆ ಹಾಗೂ ಬಂಟ್ವಾಳದ 16 ವರ್ಷದ ಬಾಲಕಿಗೆ ಕೊರೊನಾ ಸೋಂಕು ತಗಲಿರುವುದು ದೃಢಪಟ್ಟಿದೆ. ಇವರ ಪೈಕಿ, ರೋಗಿ ಸಂಖ್ಯೆ ಪಿ536ರ ಪ್ರಾಥಮಿಕ ಸಂಪರ್ಕದಲ್ಲಿದ್ದಂಥ ಇಬ್ಬರಿಗೆ ಸುಮಾರು 38 ವಯಸ್ಸಿನ ಮಹಿಳೆ ಹಾಗೂ 11 ವಯಸ್ಸಿನ ಬಾಲಕಿ ಮಂಗಳೂರು ಮಹಾನಗರ ವ್ಯಾಪ್ತಿಯ ಬೋಳೂರು ಗ್ರಾಮ ನಿವಾಸಿಗಳು. ರೋಗಿ ಸಂಖ್ಯೆ ಪಿ390ರ ಸಂಪರ್ಕದಲ್ಲಿದ್ದ 16 ವರ್ಷದ ಬಾಲಕಿ ಎನ್.ಐ.ಟಿ.ಕೆ.ಯಲ್ಲಿ ನಿಗಾದಲ್ಲಿದ್ದು, ಇವರ 12ನೇ ದಿನದ ಗಂಟಲು ದ್ರವ ವರದಿಯಲ್ಲಿ ಸೋಂಕು ದೃಢಪಟ್ಟಿರುವುದಾಗಿ ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.
ಬಂಟ್ವಾಳ ಪೇಟೆಯಲ್ಲೇ 6 ಪ್ರಕರಣ:
ಬಂಟ್ವಾಳ ಪೇಟೆಯಲ್ಲಿಯೇ ಇದು 6ನೇ ಪ್ರಕರಣ, ತಾಲೂಕಿನ ಪ್ರಕರಣಗಳ ಸಂಖ್ಯೆ 9ಕ್ಕೆ ಏರಿಕೆಯಾದಂತಾಗಿದೆ. ಬಂಟ್ವಾಳ ತಾಲೂಕಿನಲ್ಲಿ 3 ಸಾವು ಈಗಾಗಲೇ ಸಂಭವಿಸಿದ್ದು, 2 ಗುಣಮುಖರಾಗಿದ್ದಾರೆ 4 ಮಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
Be the first to comment on "ಬಂಟ್ವಾಳ ಪೇಟೆಯ ಮತ್ತೊಬ್ಬರಿಗೆ ಕೊರೊನಾ ಸೋಂಕು ದೃಢ-ಪೇಟೆಯಲ್ಲೇ 6ನೇ ಪ್ರಕರಣ"