ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ.1ರಂದು ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಬಂಟ್ವಾಳದ ಒಬ್ಬರು ಮತ್ತು ಮಂಗಳೂರಿನ ಒಬ್ಬರಿಗೆ ಕೊರೊನಾ ದೃಢಪಟ್ಟಿದೆ.
ಬಂಟ್ವಾಳ ಎಸ್.ವಿ.ಎಸ್. ಶಾಲಾ ಓಣಿ ರಸ್ತೆ ನಿವಾಸಿ ಸುಮಾರು 70 ವರ್ಷದ ವ್ಯಕ್ತಿಯೋರ್ವರಿಗೆ ಸೋಂಕು ತಗಲಿರುವುದು ದೃಢಪಟ್ಟಿದ್ದು, ಇವರು ರೋಗಿ ಸಂಖ್ಯೆ 390ರ ದ್ವಿತೀಯ ಸಂಪರ್ಕ ಹೊಂದಿದವರು ಎಂದು ತಿಳಿದುಬಂದಿದೆ. ಇದರೊಂದಿಗೆ ಬಂಟ್ವಾಳ ಪೇಟೆಯಲ್ಲಿ ಒಟ್ಟು 5 ಮಂದಿಗೆ ಕೋವಿಡ್ ದೃಢಪಟ್ಟ ಪ್ರಕರಣ ವರದಿಯಾದಂತಾಗಿದ್ದು, ಇವರಲ್ಲಿ ಒಂದೇ ಮನೆಯ ಅತ್ತೆ, ಸೊಸೆ ಸಾವನ್ನಪ್ಪಿದರೆ, ಪಕ್ಕದ ಮನೆಯ ತಾಯಿ ಮೃತಪಟ್ಟಿದ್ದು, ಮಗಳು ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ ಸೋಂಕು ತಗಲಿದ ವ್ಯಕ್ತಿ ಏ.19ರಂದು ದೃಢಪಟ್ಟು ಮೃತರಾದ ಮಹಿಳೆಯ ದ್ವಿತೀಯ ಸಂಪರ್ಕದವರು ಎಂದು ಹೇಳಲಾಗುತ್ತಿದೆ. ಹತ್ತಿರದ ಬೀದಿಗಳಲ್ಲಿ ವಾಸಿಸುವ ಈ 70ರ ಹರೆಯದ ವೃದ್ಧರಿಗೆ ಸೋಂಕು ತಗಲಿದ ಬಳಿ ಬಂಟ್ವಾಳದಲ್ಲಿ ಆತಂಕ ಮನೆ ಮಾಡಿದೆ.
ಬಂಟ್ವಾಳ ತಾಲೂಕಿನಲ್ಲಿ ಒಟ್ಟು 8 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಇವುಗಳ ಪೈಕಿ 3 ಸಾವನ್ನಪ್ಪಿದರೆ, 2 ಮಂದಿ ಗುಣಮುಖರಾಗಿದ್ದಾರೆ. 3 ಮಂದಿ ಈಗ ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ ಬಂಟ್ವಾಳ ಪೇಟೆಯ 2 ಮತ್ತು ನರಿಕೊಂಬು ನಾಯಿಲದ ಒಬ್ಬರು ಸೇರಿದ್ದಾರೆ.
Be the first to comment on "ಬಂಟ್ವಾಳಕ್ಕೆ ಮತ್ತೆ ಕೊರೊನಾ ಆಘಾತ, ಇಂದು ಮತ್ತೊಂದು ಪಾಸಿಟಿವ್ ಕೇಸ್"