ಕೊರೊನಾ ಹರಡದಂತೆ ಮುಂಜಾಗ್ರತೆಗಾಗಿ ಬಳಸಿ ಎಸೆದ ಮಾಸ್ಕ್ನ್ನು ಕೋತಿಯೊಂದು ಹಿಡಿದುಕೊಂಡಿದೆ ಎಂದು ನೀವು ಈ ಚಿತ್ರ ನೋಡಿ ಅಂದುಕೊಳ್ಳಬಹುದು. ಇದು ಕಾರಿಂಜದಲ್ಲಿ ಕಂಡು ಬಂದ ದೃಶ್ಯ. ಮಾಸ್ಕ್ ಬಳಸುವ ಜಾಗೃತಿ ಬುದ್ದಿ ಮಂಗನಿಗಾದರೂ ಇದೆ ಎಂದುಕೊಂಡು ಸಮಾಧಾನಪಟ್ಟುಕೊಳ್ಳಬಹುದು. ಆದರೆ ಮಾಸ್ಕ್ ಎಲ್ಲೆಂದರಲ್ಲಿ ಎಸೆದುದರಿಂದ ಆಗುವ ಅನಾಹುತ ಎಸೆದವರಿಗಿಲ್ಲದೇ ಹೋಯಿತೇ? ಎಲ್ಲೆಂದರಲ್ಲಿ ಎಸೆಯುವ ಮಾಸ್ಕ್ ಅನಾಹುತಗಳನ್ನೂ ಮಾಡಬಹುದು. ದಯವಿಟ್ಟು ಬಳಸಿದ ಮಾಸ್ಕ್ ಕಾರಿಂಜದಲ್ಲಿ ಮತ್ತು ಎಲ್ಲೆಂದರಲ್ಲಿ ಎಸೆಯಬೇಡಿ ಎಂದು ಕಾರಿಂಜದ ಮ್ಯಾನೇಜರ್ ಸತೀಶ್ ಪ್ರಭು ತಿಳಿಸಿದ್ದಾರೆ. ಮಾಸ್ಕ್ ಕೋತಿಯ ಬಾಯಿಗೇನೋ ಬಂತು. ದನದ ಹೊಟ್ಟೆಗೆ ಹೋದರೆ ಏನು ಮಾಡುವುದು?
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಬೀದಿ ತ್ಯಾಜ್ಯವಾದ ಬಳಸಿದ ಮಾಸ್ಕ್, ಅಲ್ಲಲ್ಲಿ ಎಸೆದರೆ ಹೀಗಾಗುತ್ತೆ!!"