ಎಪಿಎಂಸಿ ನಿಯಮಾನುಸಾರವಾಗಿ ಪ್ರತಿಯೊಬ್ಬ ರೈತರಿಗೂ ಅವರ ಉತ್ಪನ್ನಗಳ ತೂಕ, ಮೌಲ್ಯ ನಮೂದಿಸಿ ಖದೀರಿಸಲು ಅವಕಾಶವಿದೆ ಎಂದು ಬಂಟ್ವಾಳ ಎಪಿಎಂಸಿ ಅಧ್ಯಕ್ಷ ಕೆ.ಪದ್ಮನಾಭ ರೈ ಹೇಳಿದ್ದಾರೆ.
ಬಂಟ್ವಾಳದಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅಧ್ಯಕ್ಷ ಪದ್ಮನಾಭ ರೈ ಮತ್ತು ಉಪಾಧ್ಯಕ್ಷ ಚಂದ್ರಶೇಖರ ಪೂಜಾರಿ, ರೈತರಿಗೆ ಹಣಕಾಸಿನ ತೊಂದರೆಯಾಗದಂತೆ ತಮ್ಮ ಕೃಷಿ ಉತ್ಪನ್ನಗಳಾದ ಅಡಕೆ, ತೆಂಗಿನಕಾಯಿ, ಗೇರುಬೀಜ, ಕರಿಮೆಣಸು, ಕಾಡುತ್ಪತ್ತಿ ಹಾಗೂ ಇನ್ನಿತರ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಸರ್ಕಾರ ಅನುಮತಿಸಿದೆ. ಆದ್ದರಿಂದ ಬಂಟ್ವಾಳ ತಾಲೂಕಿನ ಎಪಿಎಂಸಿ ವತಿಯಿಂದ ಪರವಾನಗಿ ಪಡೆದ ವ್ಯಾಪಾರಿಗಳು ಸರ್ಕಾರದ ಕೋವಿಡ್ ಷರತ್ತುಗಳಿಗೆ ಒಳಪಟ್ಟು ಕನಿಷ್ಠ ಅಂತರ ಕಾಪಾಡಿಕೊಂಡು ಮುಖಗವಚಗಳನ್ನು ಧರಿಸಿ ಬೆಳಗ್ಗೆ 7ರಿಂದ ಮಧ್ಯಾಹ್ನ 11.30ರವರೆಗೆ ಈ ಕೃಷಿಯುತ್ಪನ್ನಗಳನ್ನು ಪ್ರತಿಯೊಬ್ಬ ರೈತರಿಗೂ ಯೋಗ್ಯ ಬೆಲೆ ನೀಡಿ ಮುಂದಿನ ಸರಕಾರದ ಆದೇಶದವರೆಗೆ ಖರೀದಿಸಬಹುದು. ಪ್ರತಿಯೊಬ್ಬ ರೈತರಿಗೂ ಅವರ ಉತ್ಪನ್ನಗಳ ತೂಕ ಮತ್ತು ಮೌಲ್ಯವನ್ನುನಮೂದಿಸಿ ಎಪಿಎಂಸಿ ನಿಯಮಾನುಸಾರವಾಗಿ ರಶೀದಿ ನೀಡತಕ್ಕದ್ದು, ಯಾವುದೇ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ತಮ್ಮ ವ್ಯಾಪಾರ ಪರವಾನಗಿಯನ್ನು ರದ್ದುಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
Be the first to comment on "ಎಪಿಎಂಸಿ ನಿಯಮಾನುಸಾರ ಕೃಷಿಯುತ್ಪನ್ನ ಖರೀದಿಗೆ ಅವಕಾಶ: ಪದ್ಮನಾಭ ರೈ"