ಬಾಯಿಮುಕ್ಕಳಿಸಿ ಸ್ವಚ್ಛವಾಗಿಸಲು ಕೋವಿಡ್ ನೆನಪು ಮಾಡಿಕೊಟ್ಟಿತು

  • ಡಾ. ಮುರಲೀ ಮೋಹನ ಚೂಂತಾರು

ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಸದ್ದು ಮಾಡಿ ಜಾಗತಿಕವಾಗಿ 210ಕ್ಕೂ ದೇಶಗಳಲ್ಲಿ ಆರೋಗ್ಯ ತುರ್ತುಸ್ಥಿತಿಯನ್ನು ತಂದಿಟ್ಟಿರುವ ಕೋವಿಡ್-19 ರೋಗದ ಆರ್ಭಟದಿಂದಾಗಿ ಜನರು ರೋಗವನ್ನು ತಡೆಗಟ್ಟುವ ವಿಚಾರವಾಗಿ ಹೆಚ್ಚು ಹೆಚ್ಚು ತಲೆಗೆಡಿಸಿಕೊಂಡಿದ್ದಾರೆ.. ರೋಗಕ್ಕೆ  ಲಸಿಕೆ ಮತ್ತು ಚಿಕಿತ್ಸೆ  ಇಲ್ಲದ ಕಾರಣದಿಂದಾಗಿ ವೈರಾಣು  ದೇಹಕ್ಕೆ  ಸೇರದಂತೆ ಮತ್ತು  ದೇಹದೊಳಗೆ ಸೇರಿದ ವೈರಾಣು ನಿರ್ಮೂಲನಕ್ಕೆ  ಜನರು ಹೆಚ್ಚು  ಉಪಾಯಗಳನ್ನು  ಕಂಡು ಹುಡುಕುತ್ತಿದ್ದಾರೆ. ನಿಟ್ಟಿನಲ್ಲಿ  ಇತ್ತೀಚಿನ ದಿನಗಳಲ್ಲಿ ಜನರು  ಹೆಚ್ಚು  ಹೆಚ್ಚು  ಗಾರ್ಗ್ಲಿಂಗ್  ಅಥವಾ ಬಾಯಿ ಮುಕ್ಕಳಿಸುವುದನ್ನು ರೂಢಿ ಮಾಡಿಕೊಳ್ಳುತ್ತಿದ್ದಾರೆ. ಗಾರ್ಗ್ಲಿಂಗ್ ವಿಚಾರದ ಬಗ್ಗೆ ಯಾವುದೇ ರೀತಿಯ ವೈಜ್ಞಾನಿಕವಾದ ದೊಡ್ಡ ಮಟ್ಟದ ಸಂಶೋಧನೆ ನಡೆದಿಲ್ಲ ಹಾಗೂ ಗಾರ್ಗ್ಲಿಂಗ್ ಉಪಯೋಗಗಳ ಬಗ್ಗೆ ಸೂಕ್ತವಾದ ಮಾಹಿತಿಯೂ ಇರುವುದಿಲ್ಲ. ಅಲ್ಲಲ್ಲಿ ಸಣ್ಣ ಮಟ್ಟಿನ ಪ್ರಾಯೋಗಿಕ ಪರೀಕ್ಷೆಗಳು ನಡೆದು ರೀತಿ ಗಾರ್ಗ್ಲಿಂಗ್ ಮಾಡುವುದರಿಂದ ಬಾಯಿಯೊಳಗಿನ ಬ್ಯಾಕ್ಟೀರಿಯಾ ಮತ್ತು  ವೈರಾಣುಗಳ ಸಂಖ್ಯೆ ತಾತ್ಕಾಲಿಕವಾಗಿ  ಕುಂಠಿತವಾಗಿವೆ ಎಂದೂ ತಿಳಿದು ಬಂದಿದೆ. ಆದರೆ ಕೋವಿಡ್೧೯ ರೋಗವನ್ನು  ತಡೆಗಟ್ಟುವ  ಮತ್ತು ರೋಗದ ಚಿಕಿತ್ಸೆಯಲ್ಲಿ ಗಾರ್ಗ್ಲಿಂಗ್ ಮಹತ್ವದ ಮತ್ತು ಪಾತ್ರದ ಬಗ್ಗೆ ಹೆಚ್ಚಿನ ವಿವರ ದೊರೆತಿಲ್ಲ ಸಾಮಾನ್ಯವಾಗಿ ಜನರು ಉಪ್ಪು ಸೇರಿಸಿದ ಬಿಸಿನೀರುಕ್ಲೋರ್ಹೆಕ್ಸಿಡಿನ್ ಔಷಧಿ ಮತ್ತು  ಪೋವಿಡಿನ್ಅಯೋಡಿನ್  ಔಷಧಿ ಬಳಸಿ ಹೆಚ್ಚಿನ ಮಂದಿ  ಪದೇ ಪದೇ ಬಾಯಿ ಮುಕ್ಕಳಿಸುತ್ತಿರುವುದಂತೂ ನಿಜ ಎಂದೂ ಅಂಕಿಅಂಶಗಳಿಂದ ತಿಳಿದು ಬಂದಿದೆ.

ಏನಿದು ಗಾರ್ಗ್ಲಿಂಗ್?

ಇದೊಂದು ರೀತಿಯ  ಆರೋಗ್ಯ ರಕ್ಷಣಾ  ವಿಧಾನವಾಗಿದ್ದುಔಷಧಿಗಳನ್ನು ಬಳಸಿ ಒಂದೆರಡು ನಿಮಿಷಗಳ ಕಾಲ ಬಾಯಿಯ ಒಳಗೆ, ಗಂಟಲಿನ ಭಾಗದಲ್ಲಿ ಔಷಧಿ ಇರುವಂತೆ ಮಾಡಿ ತಲೆಯನ್ನು ಮೇಲಕ್ಕೆ ಮಾಡಿ ಔಷಧಿಗಳು ಬಾಯಿಯೊಳಗಿನ ಪದರದ ಮುಖಾಂತರ ಪಸರಿಸುವಂತೆ ಮಾಡಿರೋಗಾಣುಗಳನ್ನು ನಾಶ ಮಾಡುವ ಒಂದು ವಿಧಾನವಾಗಿರುತ್ತದೆ. ಸಾಮಾನ್ಯವಾಗಿ ಶೀತ, ಜ್ವರ, ಗಂಟಲು ನೋವು ಇರುವಾಗ ಹೆಚ್ಚಿನವರು ರೀತಿ ಗಾರ್ಗ್ಲಿಂಗ್ ಮಾಡುವ ಹವ್ಯಾಸ ಬೆಳೆಸಿಕೊಂಡಿರುತ್ತಾರೆ. ಏಷ್ಯಾ ಖಂಡದಲ್ಲಿ ಬಹುತೇಕ ಮಂದಿ ಕ್ರಮವನ್ನು ರೂಢಿಸಿಕೊಂಡಿದ್ದಾರೆ. ಜಪಾನ್ ದೇಶದಲ್ಲಿ ಸರಕಾರವೇ ಜನರಿಗೆ ಕೈ ತೊಳೆಯುವುದು, ಮುಖಕವಚ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಬಾಯಿ ಮುಕ್ಕಳಿಸುವುದನ್ನು  ಕಡ್ಡಾಯವಾಗಿ  ಮಾಡಬೇಕೆಂದು  ಸೂಚಿಸಿದೆ. ರೀತಿ  ಮಾಡುವುದರಿಂದ  ಶ್ವಾಸಕೋಶದ ಮೇಲ್ಭಾಗದ  ಮತ್ತು ಕೆಳಭಾಗದ ಸೋಂಕಿನ ಅನುಪಾತ ಅಥವಾ  ಪ್ರಮಾಣ ಕುಂಠಿತವಾಗಿದೆ ಎಂದೂ ತಿಳಿದು ಬಂದಿದೆಬಹಳ ಸುಲಭವಾಗಿ ಮನೆಯಲ್ಲಿಯೇ ಮಾಡುವ  ಪ್ರಕ್ರಿಯೆಗೆ  ೨ರಿಂದ ನಿಮಿಷ ತಗಲುತ್ತದೆ. ಕುತ್ತಿಗೆ ನೋವು, ಪಾರ್ಶ್ವವಾಯು, ಮರೆಗುಳಿತನ  ಮತ್ತು ವರ್ಷಕ್ಕಿಂತ  ಕೆಳಗಿನ  ಮಕ್ಕಳಲ್ಲಿ  ಪರಿಣಾಮಕಾರಿಯಾಗಿ  ಗಾರ್ಗ್ಲಿಂಗ್  ಮಾಡಲು  ಕಷ್ಟವಾಗಬಹುದುಬಹುತೇಕ ಉಳಿದ ಎಲ್ಲರೂ ಪುರುಷ ಮಹಿಳೆ ಎಂಬ ಭೇದವಿಲ್ಲದೆ ರೀತಿ ಗಾರ್ಗ್ಲಿಂಗ್ ಮಾಡುವುದರಿಂದ, ಹೆಚ್ಚಿನ  ಬ್ಯಾಕ್ಟೀರಿಯಾ ಮತ್ತು ವೈರಸ್ ಸೋಂಕು ತಡೆಗಟ್ಟಬಹುದು ಎಂದೂ ಅಂದಾಜಿಸಲಾಗಿದೆ. ಅತೀ ಕಡಿಮೆ ಖರ್ಚಿನ, ಯಾವುದೇ ರೀತಿಯ ಅಡ್ಡ ಪರಿಣಾಮ ಇಲ್ಲದ ಬಹಳ ಸುಲಭದ ರೋಗ ತಡೆಗಟ್ಟುವ ವಿಧಾನ ಇದಾಗಿರುತ್ತದೆ.

ಗಾರ್ಗ್ಲಿಂಗ್ ಮಾಡಲು  ಏನನ್ನು ಬಳಸುತ್ತಾರೆ

ಹದವಾದ ಬೆಚ್ಚಗಿನ ಅಥವಾ ಉಗುರು ಬೆಚ್ಚಗಿನ  ನೀರಿನಲಿ (೧೦೦ ಎಂ.ಎಲ್) ಒಂದು ಚಮಚ ಉಪ್ಪು ಸೇರಿಸಿ ತಯಾರು ಮಾಡಲಾದ ದ್ರಾವಣ ಇದು % ಸಾಂದ್ರತೆಯ ದ್ರಾವಣವಾಗಿರುತ್ತದೆಇದಕ್ಕೆ ಆಂಟಿಸೆಪ್ಟಿಕ್ ಗುಣ ಇದೆ ಎಂದು ಹೇಳಲಾಗಿದೆ. ಅತೀ ಕಡಿಮೆ ವೆಚ್ಚದ, ಸುಲಭದ ಮತ್ತು ಮನೆಯಲ್ಲಿಯೇ ತಯಾರು ಮಾಡಬಹುದಾದ ದ್ರಾವಣವನ್ನು ಬಹುತೇಕ ಎಲ್ಲರೂ ಒಂದಲ್ಲ ಒಂದು ಕಾರಣದಿಂದ ಬಳಸುತ್ತಾರೆ. ಸಾರ್ವತ್ರಿಕವಾಗಿ ಬಾಯಿಯಲ್ಲಿನ ಬ್ಯಾಕ್ಟೀರಿಯಾ ಮತ್ತು ವೈರಾಣು ಸೋಂಕು ಕಡಿಮೆ ಮಾಡಲು ಬಳಸುವ ಏಕೈಕ ವಿಧಾನ ಇದಾಗಿದೆ.

ಕ್ಲೋರ್ಹೆಕ್ಸಿಡಿನ್ ಎಂಬ ಔಷಧಿಯನ್ನು ಕೂಡಾ ಬಾಯಿ ಮುಕ್ಕಳಿಸಲು ಬಳಸುತ್ತಾರೆ. ಹಲ್ಲು ನೋವಿಗೆ, ಬಾಯಿಯಲ್ಲಿನ ಬ್ಯಾಕ್ಟೀರಿಯಾ ಸೋಂಕಿಗೆ, ಬಾಯಿ ವಾಸನೆಗೂ ಇದನ್ನು ಬಳಸುತ್ತಾರೆ. ವೈರಾಣುವಿನ ವಿರುದ್ಧ  ಇದರ ಕಾರ್ಯವೈಖರಿ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ.

ಬೆನ್ಜಾಲ್ಕೋನಿಯಮ್ ಕ್ಲೋರೈಡ್ ಎಂಬ ಔಷಧಿಯುಳ್ಳ ದ್ರಾವಣವನ್ನು ಗಂಟಲಿನ ಸೋಂಕು ನಿವಾರಣೆಗೆ  ಗಾರ್ಗ್ಲಿಂಗ್ ಮಾಡಲು ಬಳಸುತ್ತಾರೆ.

ಪೋವಿಡಿನ್ಅಯೋಡಿನ್ ಎಂಬ ಶೇ. ಸಾಮರ್ಥ್ಯದ ಅಯೋಡಿನ್ ದ್ರಾವಣ ಬಹಳ ಉಪಯುಕ್ತವಾದ ಗಾರ್ಗ್ಲಿಂಗ್ ದ್ರಾವಣ ಆಗಿರುತ್ತದೆ. ಇತ್ತೀಚಿಗೆ  ಜರ್ಮನ್  ದೇಶದಲ್ಲಿ  ಬಗ್ಗೆ ಪ್ರಾಯೋಗಿಕ ಪರೀಕ್ಷೆ ನಡೆದು  ಕೊರೋನಾ ಗುಂಪಿಗೆ  ಸೇರಿದ ಸಾರ್ಸ್ ಮತ್ತು ಎಂಇಆರ್ಎಸ್ ರೋಗಕ್ಕೆ ಕಾರಣವಾಗುವ ಕೊರೋನಾ ವೈರಾಣುವಿನ ವಿರುದ್ಧ   ಅಯೋಡಿನ್ ದ್ರಾವಣ ಶೇಕಡಾ ೯೯ರಷ್ಟು ಉಪಯುಕ್ತ ಎಂದೂ ತಿಳಿದುಬಂದಿದೆ. ಇದೇ ರೀತಿ ಜಪಾನಿನಲ್ಲಿಯೂ ಪ್ರಯೋಗಾತ್ಮಕ ಪರೀಕ್ಷೆಗಳು ನಡೆದು ಅಯೋಡಿನ್ ದ್ರಾವಣವನ್ನು ಗಾರ್ಗ್ಲಿಂಗ್ಗೆ ಬಳಸುವುದರಿಂದ ಬರೀ ಕೊರೋನಾ ಅಲ್ಲದೆ, ಕೊಕ್ಸಾಕಿ ವೈರಸ್, ರೈನೋವೈರಸ್, ಅಡಿನೋ ವೈರಸ್, ರೋಟಾವೈರಸ್, ಇನ್ಪ್ಲುಯೆಂಜಾ ವೈರಸ್  ವಿರುದ್ಧ  ಕೂಡಾ ಬಹಳ ಪರಿಣಾಮಕಾರಿ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಶೇ. ಸಾಮರ್ಥ್ಯ ಪೋವಿಡಿನ್ಅಯೋಡಿನ್ ದ್ರಾವಣವನ್ನು ದಿನದಲ್ಲಿ ೨ರಿಂದ ೩ಬಾರಿ ಬಾಯಿ ಮುಕ್ಕಳಿಸಿದಲ್ಲಿ ಬಾಯಿ ಮತ್ತು ಗಂಟಲಿನಲ್ಲಿ ಹುದುಗಿಕೊಂಡಿರುವ ಹೆಚ್ಚಿನ ಎಲ್ಲಾ  ವೈರಾಣುಗಳನ್ನು ನಾಶಪಡಿಸಬಹುದು ಎಂದು ಅಂದಾಜಿಸಲಾಗಿದೆ. ಆದರೆ ವಿಚಾರದ ಬಗ್ಗೆ ಇನ್ನೂ ಹೆಚ್ಚಿನ ದೊಡ್ಡ ಸಂಖ್ಯೆಯ ಪ್ರಾಯೋಗಿಕ ಪರೀಕ್ಷೆ ನಡೆಯಬೇಕಾಗಿದೆ. ಕೋವಿಡ್೧೯ ಅಂದರೆ  ಕೊರೋನಾ ವೈರಸ್ ಡಿಸೀಸ್೨೦೧೯ ಎಂಬ ರೋಗಕ್ಕೆ  ಕಾರಣವಾದಸಾರ್ಸ್ಕೋವಿ ಎಂಬ ವೈರಾಣುವಿನ  ವಿರುದ್ಧ ಶೇ. ಪೋವಿಡಿನ್ಅಯೋಡಿನ್ ದ್ರಾವಣ ಹೇಗೆ ವರ್ತಿಸುತ್ತದೆ ಎಂಬುದರ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ನಡೆಯಬೇಕಾಗಿದೆ. ಅದೇನೇ ಇರಲಿ ಹೆಚ್ಚಿನ ಎಲ್ಲಾ ವೈರಾಣುಗಳನ್ನು  ಕೊಲ್ಲುವ  ಅಯೋಡಿನ್  ದ್ರಾವಣ ಖಂಡಿತವಾಗಿಯೂ  ಸಾರ್ಸ್ಕೋವಿ ವೈರಾಣುವನ್ನು ನಾಶಪಡಿಸುತ್ತದೆ ಎಂಬುದು ವೈದ್ಯರ  ಬಲವಾದ  ನಂಬಿಕೆಯಾಗಿರುತ್ತದೆ. ಕಾರಣದಿಂದ  ಕೋವಿಡ್೧೯ ರೋಗವನ್ನು  ಎದುರಿಸುವಲ್ಲಿ ಅಯೋಡಿನ್ ಗಾರ್ಗ್ಲಿಂಗ್ ಬಹಳ ಮುಖ್ಯ ಭೂಮಿಕೆ ವಹಿಸುತ್ತದೆ ಎಂದು ಅಂದಾಜಿಸಲಾಗಿದೆ.

ಕೊನೆಮಾತು:

ಗಾರ್ಗ್ಲಿಂಗ್ ಎನ್ನುವ ಚಿಕಿತ್ಸಾ ಪದ್ಧತಿ ಗಂಟಲು ಕೆರೆತ ಮತ್ತು ಗಂಟಲು ನೋವಿಗೆ ಹೆಚ್ಚಿನವರು ಮನೆಯಲ್ಲಿಯೇ ಮಾಡಿಕೊಳ್ಳುವ ಚಿಕಿತ್ಸಾ ವಿಧಾನವಾಗಿದ್ದು, ಕೋವಿಡ್೧೯ ರೋಗಕ್ಕೆ ಪರಿಣಾಮ ನೀಡುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆ ಇರುವುದಿಲ್ಲ. ಆದರೆ ರೀತಿ ಗಾರ್ಗ್ಲಂಗ್ ಮಾಡುವುದರಿಂದ ಬಾಯಿಯಲ್ಲಿ ಮತ್ತು ಗಂಟಲಿನಲ್ಲಿರುವ ವೈರಾಣು ಮತ್ತು ಬ್ಯಾಕ್ಟೀರಿಯಾಗಳ ಸಂಖ್ಯೆ ಗಣನೀಯವಾಗಿ ಕುಂಠಿತವಾಗುತ್ತದೆ ಎಂದು ತಿಳಿದು ಬಂದಿದೆಜೋರಾಗಿ ನಿಮಿಷ ಬಾಯಿ ಮುಕ್ಕಳಿಸಿದಾಗ  ಒತ್ತಡ ಮತ್ತು  ಔಷಧಿಯ ಪರಿಣಾಮದಿಂದ  ಒಂದಷ್ಟು ಲಾಭವಾಗುತ್ತದೆ ಎಂದು ಅಂದಾಜಿಸಲಾಗಿದೆ. ಆದರೆ ರೀತಿ  ಮಾಡುವುದರಿಂದ ರೋಗಿಗೆ ಯಾವುದೇ ರೀತಿಯ  ನಷ್ಟವಾಗುವುದಿಲ್ಲದ ಕಾರಣ ಎಲ್ಲರೂ ಗಾರ್ಗ್ಲಿಂಗ್ ಮಾಡುವುದು ಸೂಕ್ತ ಎಂಬುದೇ ವೈದ್ಯರ ಒಕ್ಕೊರಲಿನ  ಅಭಿಮತವಾಗಿರುತ್ತದೆ. ಇನ್ನು ಕೋವಿಡ್೧೯  ವೈರಾಣು  ಶ್ವಾಸಕೋಶಕ್ಕೆ  ಹೋಗುವ  ಮೊದಲು 2 ರಿಂದ 3 ದಿನಗಳ ಕಾಲ  ಗಂಟಲಿನಲ್ಲಿ  ಇರುತ್ತದೆ. ಸಂದರ್ಭದಲ್ಲಿ ಗಂಟಲಿನ ಕೆರೆತ ಮತ್ತು ನೋವು ಇರುತ್ತದೆ. ಸಂದರ್ಭದಲ್ಲಿ ಗಾರ್ಗ್ಲಿಂಗ್ ಮಾಡುವುದರಿಂದ  ಕೋವಿಡ್೧೯ ಸೋಂಕು ಬರುವುದಿಲ್ಲ ಎಂಬುದು ನಂಬತಕ್ಕ ವಿಚಾರವಲ್ಲ. ವಿಚಾರ ಬಗ್ಗೆ ಯಾವುದೇ  ವೈಜ್ಞಾನಿಕ ಪುರಾವೆ ಇರುವುದಿಲ್ಲ. ಅದೇ ರೀತಿ  ಬಿಸಿನೀರಿಗೆ ಉಪ್ಪು ಮತ್ತು ವಿನೆಗರ್ ಬಳಸಿ ಗಾರ್ಗ್ಲಿಂಗ್ ಮಾಡುವುದರಿಂದಲೂ ಕೊರೋನಾ ವೈರಾಣು ನಾಶವಾಗುತ್ತದೆ ಎಂಬುದಕ್ಕೂ  ಯಾವುದೇ  ವೈಜ್ಞಾನಿಕ  ತಳಹದಿ ಇರುವುದಿಲ್ಲ. ಆದರೆ  ಇತರ ಎಲ್ಲಾ ವೈರಾಣು ಬರದಂತೆ  ಮಾಡುವ ಕ್ರಿಯೆಗಳಾದ ಸೋಪಿನಿಂದ ಕೈತೊಳೆಯುವುದು, ಸ್ಯಾನಿಟೈಸರ್ ಬಳಸುವುದು, ಮುಖಕವಚ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಗಾರ್ಗ್ಲಿಂಗ್  ಮಾಡುವುದರಿಂದ ಗಂಟಲಿನ ಒಳಗಿರುವ ವೈರಾಣುಗಳ ಸಂಖ್ಯೆಯನ್ನು ನಿಯಂತ್ರಿಸಬಹುದು ಹಾಗೂ ರೋಗದ ತೀವ್ರತೆಯನ್ನು ನಿಯಂತ್ರಿಸಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಕಾರಣದಿಂದ ಗಾರ್ಗ್ಲಿಂಗ್ ಮಾಡುವುದರಿಂದ ಲಾಭವಿಲ್ಲದಿದ್ದರೂ ನಷ್ಟವೇನಿಲ್ಲ ಎಂಬ ಸಮಜಾಯಿಷಿ ನೀಡಲಾಗಿದೆ. ಗಾರ್ಗ್ಲಿಂಗ್ ಮಾಡಲು ಶೇಕಡಾ ಪೋವಿಡಿನ್ಅಯೋಡಿನ್ ದ್ರಾವಣ ಸೂಕ್ತ ಎಂದೂ ವೈದ್ಯರು  ಅಭಿಪ್ರಾಯಪಟ್ಟಿದ್ದಾರೆ.

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.

ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ 

  

 

Be the first to comment on "ಬಾಯಿಮುಕ್ಕಳಿಸಿ ಸ್ವಚ್ಛವಾಗಿಸಲು ಕೋವಿಡ್ ನೆನಪು ಮಾಡಿಕೊಟ್ಟಿತು"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*