ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವಾರ 4 ಕೋವಿಡ್ ಪಾಸಿಟಿವ್ ಕೇಸ್ ಬಂದಿದ್ದು, ಎಲ್ಲವೂ ಬಂಟ್ವಾಳದ್ದಾಗಿದೆ. ಅವುಗಳ ಪೈಕಿ ಇಬ್ಬರು ಮೃತಪಟ್ಟಿದ್ದು, ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರೂ ಮಹಿಳೆಯರೇ ಆಗಿದ್ದಾರೆ. ಕಳೆದ ಭಾನುವಾರ, ಮಂಗಳವಾರ, ಗುರುವಾರ ಮತ್ತು ಇಂದು ಶನಿವಾರ ಪಾಸಿಟಿವ್ ಕೇಸ್ ಗಳು ದೃಢಪಟ್ಟಿವೆ. ಈವರೆಗೆ ಒಟ್ಟು 18 ಪಾಸಿಟಿವ್ ಕೇಸ್ ಬಂದಿದ್ದು, ಅವುಗಳ ಪೈಕಿ ಇಬ್ಬರು ಮೃತರಾಗಿದ್ದಾರೆ. 12 ಬಿಡುಗಡೆ ಹೊಂದಿದ್ದು, ನಾಲ್ಕು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಕ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಶನಿವಾರ ಸಂಜೆ ಹೊರಡಿಸಿದ ಬುಲೆಟಿನ್ ನ ಮುಖ್ಯಾಂಶಗಳು ಇಲ್ಲಿವೆ:
ಶನಿವಾರ 90 ಮಂದಿಯ ಪರೀಕ್ಷಾ ವರದಿ ಬಂದಿದ್ದು, ಇವರ ಪೈಕಿ 1 ಪಾಸಿಟಿವ್ ಆಗಿದೆ. ಉಸಿರಾಟದ ತೊಂದರೆ ಇರುವ ಒಟ್ಟು 16 ಮಂದಿಯನ್ನು ಗುರುತಿಸಲಾಗಿದೆ. ಜ್ವರ ಕ್ಲಿನಿಕ್ ಗಳಲ್ಲಿ 1406 ಮಂದಿ ತಪಾಸಣೆ ನಡೆಸಿದ್ದಾರೆ. 42 ಮಂದಿಯನ್ನು ನಿಗಾದಲ್ಲಿ ಇರಿಸಲಾಗಿದೆ.
ಶನಿವಾರ 211 ಮಂದಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಒಟ್ಟು 584 ಮಂದಿಯ ಪರೀಕ್ಷಾ ವರದಿ ಬರಲು ಬಾಕಿ ಇದೆ.
ಒಟ್ಟು 1446 ಮಂದಿಯ ಗಂಟಲು ದ್ರವ ಮಾದರಿಯ ಪರೀಕ್ಷಾ ವರದಿ ಬಂದಿದೆ. ಈವರೆಗೆ 2030 ಮಂದಿಯ ಸ್ಯಾಂಪಲ್ ಕಳುಹಿಸಲಾಗಿದೆ. 1428 ನೆಗೆಟಿವ್ ಬಂದಿದ್ದು, 18 ಪಾಸಿಟಿವ್ ಆಗಿದೆ. ಅವುಗಳ ಪೈಕಿ ಇಬ್ಬರು ಮೃತಪಟ್ಟಿದ್ದು, 4 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 12 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ.
ಸುರತ್ಕಲ್ ಎನ್.ಐ.ಟಿ.ಕೆ.ಯಲ್ಲಿ 49 ಮಂದಿ ಕ್ವಾರಂಟೈನ್ ನಲ್ಲಿದ್ದಾರೆ. ಮಂಗಳೂರಿನ ಇ.ಎಸ್.ಐ.ನಲ್ಲಿದ್ದ 10 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ. ಒಟ್ಟು 6073 ಮಂದಿ 28 ದಿನಗಳ ಹೋಂ ಕ್ವಾರಂಟೈನ್ ಅವಧಿ ಮುಗಿಸಿದ್ದಾರೆ.
ಜ್ವರ ಇದ್ದರೆ ಕೂಡಲೇ ಸಂಪರ್ಕಿಸಿ: ಸಾರ್ವಜನಿಕರಲ್ಲಿ ತೀವ್ರ ಉಸಿರಾಟದ ತೊಂದರೆ ಅಥವಾ ಜ್ವರ ಕಂಡುಬಂದರೆ ಫೀವರ್ ಕ್ಲಿನಿಕ್ ಗಳಲ್ಲಿ ಪರೀಕ್ಷಿಸಿಕೊಳ್ಳಲು ಸೂಚಿಸಲಾಗಿದೆ.
ಕಟ್ಟಡ ಕಾಮಗಾರಿ ನಡೆಸುತ್ತಿದ್ದರೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ: ದ.ಕ.ಜಿಲ್ಲೆಯಲ್ಲಿ ಲಾಕ್ ಡೌನ್ ನಿಂದ ಸ್ಥಗಿತಗೊಂಡಿರುವ ಕಟ್ಟಡ ಕಾಮಗಾರಿ ಮುಂದುವರಿಸಲು ಇಚ್ಛಿಸುವ ಪರವಾನಗಿದಾರರು ಆನ್ಲೈನ್ ನಲ್ಲಿ bit.ly/dkdevelopment ಲಿಂಕ್ ಬಳಸಿ ಅರ್ಜಿ ಸಲ್ಲಿಸತಕ್ಕದ್ದು. ಕಾರ್ಮಿಕರು ಕಟ್ಟಡ ನಿರ್ಮಾಣ ಸ್ಥಳದಲ್ಲಿ ಅಂತರ ಕಾಯ್ದುಕೊಳ್ಳುವುದು, ಅಲ್ಲೇ ಇರುವುದು ಹಾಗೂ ಕೊರೊನಾ ಸೋಂಕು ಹರಡದಂತೆ ಮುಂಜಾಗರೂಕತಾ ಕ್ರಮ ಕೈಗೊಳ್ಳುವುದು ಕಡ್ಡಾಯ. ಸ್ಥಳದಲ್ಲಿ ಒಬ್ಬ ಪ್ರಾಜೆಕ್ಟ್ ಮ್ಯಾನೇಜರ್ ನೇಮಿಸತಕ್ಕದ್ದು.
ವಲಸೆ ಕಾರ್ಮಿಕರ ಸ್ಥಳಾಂತರ: ರಾಜ್ಯ ಸರ್ಕಾರದ ಆದೇಶ ಮೇರೆಗೆ ದ.ಕ.ಜಿಲ್ಲೆಯ ಆಶ್ರಯ ತಾಣಗಳಲ್ಲಿದ್ದ ಇತರ ಜಿಲ್ಲೆಗಳ ವಲಸೆ ಕಾರ್ಮಿಕರನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ.
Be the first to comment on "ದ.ಕ.: 584 ಮಂದಿ ಪರೀಕ್ಷಾ ವರದಿ ಬರಲು ಬಾಕಿ, ಇವತ್ತು ಒಬ್ಬರಿಗೆ ಪಾಸಿಟಿವ್"