ಕರೋನಾ ನಿರ್ವಹಣೆಗೆ ಹಾಗೂ ಲಾಕ್‍ಡೌನ್ ಯಶಸ್ವಿಗೆ ತಾಲೂಕು ಪಂಚಾಯತ್‍ಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಸೂಚಿಸಿದ್ದಾರೆ.
ಗುರುವಾರ ಜಿಲ್ಲಾ ಪಂಚಾಯತ್‍ನಲ್ಲಿ ವೀಡಿಯೋ ಕಾನ್ಫೆರೆನ್ಸ್ ಮೂಲಕ ಜಿಲ್ಲೆಯ ತಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ಈ ಸಂದರ್ಭದಲ್ಲಿಚರ್ಚೆಯ ನಂತರ 14ನೇ ಹಣಕಾಸಿನ ಅನುದಾನದಲ್ಲಿ ಕರೋನಾ ನಿಯಂತ್ರಣಕ್ಕೆ ಬೇಕಾದ ಯೋಜನೆ ರೂಪಿಸಲು ಸರಕಾರದ ಅನುಮತಿ ಸೇರಿದಂತೆ, ಕರೋನಾ ಜಾಗೃತಿಗೆ ಪ್ರತೀ ಗ್ರಾ.ಪಂ.ಗೆ 20 ಸಾವಿರದಂತೆ ಅನುದಾನ ನೀಡಲಾಗಿದೆ. ಇದನ್ನುಯಾವ ರೀತಿ ಖರ್ಚು ಮಾಡಬಹುದು ಎಂಬುದರ ಸಮಗ್ರ ಮಾಹಿತಿ ಪಡೆದ ಸಚಿವರು, ಕರೋನಾ ನಿಯಂತ್ರಣಕ್ಕೆಎಲ್ಲರೂ ತಂಡವಾಗಿ ಕೆಲಸ ಮಾಡಬೇಕಿದೆ ಎಂದರು.
ಸುಳ್ಯ, ಮಂಗಳೂರು, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ತಾಲೂಕು ಪಂಚಾಯತ್‍ಅಧ್ಯಕ್ಷ, ಉಪಾಧ್ಯಕ್ಷರು, ಕಾರ್ಯನಿರ್ವಹಣಾಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದು, ತಮ್ಮ ತಾಲೂಕುಗಳಲ್ಲಿ ನಡೆಯುತ್ತಿರುವ ಕರೋನಾ ಕಾರ್ಯಕ್ರಮಗಳ ಮಾಹಿತಿ ನೀಡಿದರು.
ಅಪಾರ್ಟ್‍ಮೆಂಟ್‍ಗಳ ಮೂಲಸೌಕರ್ಯ ಸಮೀಕ್ಷೆಗೆ ಸೂಚನೆ: ಜಿಲ್ಲೆಯಾದ್ಯಂತ ಇರುವಎಲ್ಲಾ ವಸತಿ ಸಮುಚ್ಛಯಗಳ ಕೊಳಚೆ ನೀರು ತೆರದ ಚರಂಡಿಯಲ್ಲೇ ಹರಿದು ಸ್ಥಳಿಯರ ಬಾವಿ ಹಾಳಾಗಿದ್ದು, ರೋಗಗಳು ಬರುವ ಅಪಾಯಇದೆ. ಈ ಹಿನ್ನೆಲೆಯಲ್ಲಿ ತಕ್ಷಣ ಸಮೀಕ್ಷೆ ನಡೆಸಿ, ಜಿಲ್ಲೆಯಾದ್ಯಂತ ಇರುವ ವಸತಿ ಸಮುಚ್ಛಯಗಳ ಮೂಲಭೂತ ಸಮೀಕ್ಷೆಗಳ ಹೇಗೆ ಇದೆ ಎಂಬುದರ ಬಗ್ಗೆ ವರದಿ ನೀಡಲು ಸಚಿವರು ನಿರ್ದೇಶಿಸಿದರು. ಈ ಸಂದರ್ಭ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು, ಜಿ.ಪಂ. ಅಧ್ಯಕ್ಷ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ಕರೋನಾ, ಲಾಕ್‍ಡೌನ್ ನಿರ್ವಹಣೆ: ಸಕ್ರಿಯವಾಗಿ ತೊಡಗಿಸಲು ತಾ.ಪಂ.ಗಳಿಗೆ ಸಚಿವರ ಸೂಚನೆ"