- ಸುನೀಲ್, ಅಪೂರ್ವ ಜ್ಯುವೆಲರ್ಸ್ ಬಿ.ಸಿ.ರೋಡ್.
ವಿಶ್ವದಾದ್ಯಂತ ಸದ್ದು ಮಾಡಿರುವ ಕೊರೊನಾ ನಮ್ಮೂರಲ್ಲೇ ತೊಂದರೆ ಕೊಡುತ್ತಿದೆ. ನಾವೆಲ್ಲರೂ ಜಾಗರೂಕರಾಗಿರೋಣ. ಸದ್ಯಕ್ಕೆ ಕೊರೊನಾ ಹರಡದೆ ಇರುವಂತೆ ಜಾಗರೂಕತೆ ವಹಿಸುವುದೊಂದೇ ನಮಗಿರುವ ಏಕೈಕ ಆಯ್ಕೆ.
ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪೋಲೀಸ್ ಇಲಾಖೆ,ಆಶಾ ಕಾರ್ಯಕರ್ತೆಯರು ಇವರೆಲ್ಲಾ ನಮ್ಮ ರಕ್ಷಣೆಗಾಗಿ ಅವರ ಜೀವವನ್ನೇ ಮುಡಿಪಾಗಿಟ್ಟು ಶ್ರಮಿಸುತ್ತಿದ್ದಾರೆ. ಅವರ ಕರ್ತವ್ಯ ಕ್ಕೆ ಅಡ್ಡಿ ಪಡಿಸದೆ ಅವರೊಂದಿಗೆ ಸಹಕರಿಸಿ ಅವರು ಕೊಡುವ ಸೂಚನೆಗಳನ್ನು ಪ್ರಜ್ಞಾವಂತರಾಗಿ ಪಾಲಿಸುವುದು ಉತ್ತಮ.
ದಿಗಿಲಾಗುವ ಸುಳ್ಳು ಸುದ್ದಿ, ರಾಜಕೀಯ ಪ್ರೇರಿತ ಊಹಾಪೋಹಗಳಿಗೆ ಆಸ್ಪದ ಕೊಡದೆ ಪರಸ್ಪರ ಸಹಾಯ ಮಾಡಿಕೊಂಡು ಈ ಮಹಾಮಾರಿ ರೋಗದ ವಿರುದ್ಧ ಸೌಹಾರ್ದತೆಯಿಂದ ಹೋರಾಡುವುದು ನಮ್ಮ ಮೊದಲ ಆದ್ಯತೆ ಆಗಬೇಕು.
ಲಾಕ್ ಡೌನ್ ಸಮಯದಲ್ಲಿ ಇರುವ ಸಮಸ್ಯೆಗಳನ್ನು ಎದುರಿಸುವುದು ಒಂದು ಸವಾಲು ಆದರೆ ಅದು ಮುಗಿದ ಬಳಿಕ ಮುಂಬರುವ ಸವಾಲುಗಳನ್ನು, ಕಷ್ಟಗಳನ್ನು ಎದುರಿಸುವುದು ಅದಕ್ಕಿಂತ ದೊಡ್ಡ ಸವಾಲು ಆ ಬಗ್ಗೆ ಮಾನಸಿಕವಾಗಿ ಸಿದ್ಧರಾಗುವುದು ತುಂಬಾ ಅನಿವಾರ್ಯ.
ಸದ್ಯಕ್ಕೆ ಸರಕಾರ ಇದಕ್ಕಿಂತ ಉತ್ತಮವಾಗಿ ಇನ್ನೇನನ್ನೂ ಮಾಡುವಂತಿಲ್ಲ ಎಂಬುದು ನನ್ನ ಅನಿಸಿಕೆ ಆದರೆ ಮುಂಬರುವ ದಿನಗಳಲ್ಲಿ ಆರ್ಥಿಕ ವ್ಯವಸ್ಥೆಯನ್ನು ಪುನರ್ನಿರ್ಮಾಣ ಮಾಡುವಲ್ಲಿ ಕಾನೂನುಗಳನ್ನು ಆದಷ್ಟು ಜನಸ್ನೇಹಿಯಾಗಿ ಪರಿವರ್ತಿಸುವುದು ಉತ್ತಮ.
Be the first to comment on "ಊಹಾಪೋಹ ಮಾಡುವುದರ ಬದಲು ಪರಸ್ಪರ ಸಹಾಯ ಮಾಡುವುದೇ ಮೊದಲ ಆದ್ಯತೆ ಆಗಿರಲಿ"