ಬುಧವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿಲ್ಲ. ಇಂದು 11 ಮಂದಿಯನ್ನು ನಿಗಾದಲ್ಲಿ ಇರಿಸಲಾಗಿದೆ. 85 ಮಂದಿಯ ಪರೀಕ್ಷಾ ವರದಿ ಬಂದಿದ್ದು ಎಲ್ಲವೂ ನೆಗೆಟಿವ್ ಇದೆ. 151 ಮಂದಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಇಂದು ಕಳುಹಿಸಲಾಗಿದೆ. ಹೀಗಾಗಿ ಒಟ್ಟು 495 ಮಂದಿಯ ಪರೀಕ್ಷಾ ವರದಿ ಬರಲು ಬಾಕಿ ಇದೆ.ಜಿಲ್ಲೆಯ ಫೀವರ್ ಕ್ಲಿನಿಕ್ ಗಳಲ್ಲಿ ಒಟ್ಟು 941 ಮಂದಿ ಇದುವರೆಗೆ ಚಿಕಿತ್ಸೆ ಪಡೆದಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮಂಗಳೂರಿನ ಎನ್.ಐ.ಟಿ.ಕೆ.ಯಲ್ಲಿ 49 ಮಂದಿ, ಇಎಸ್ ಐ ಆಸ್ಪತ್ರೆಯಲ್ಲಿ 10 ಮಂದಿ, ಹೋಂ ಕ್ವಾರಂಟೈನ್ ನಲ್ಲಿ ನಾಲ್ವರು ಈಗ ಇದ್ದಾರೆ. ಅಂದರೆ ಒಟ್ಟು ಕ್ವಾರಂಟೈನ್ ನಲ್ಲಿ ಇರುವವರ ಸಂಖ್ಯೆ 63 ಆಗಿದೆ. ಇದಲ್ಲದೆ 6069 ಮಂದಿ 28 ದಿನಗಳ ಹೋಂ ಕ್ವಾರಂಟೈನ್ ಮುಗಿಸಿದ್ದಾರೆ.
ಉಸಿರಾಟದ ತೊಂದರೆ ಇರುವ (SARI) 12 ಪ್ರಕರಣಗಳು ಬುಧವಾರ ವರದಿಯಾಗಿದ್ದು, ಅವುಗಳ ಪೈಕಿ ಒಂದನ್ನು ವೆನ್ಲಾಕ್ ಗೆ ಕಳುಹಿಸಲು ಶಿಫಾರಸು ಮಾಡಲಾಗಿದೆ.
ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಬಂಟ್ವಾಳ ಕಸಬಾ ನಿವಾಸಿ ಮಹಿಳೆಯೊಬ್ಬರಿಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಅವರ ಆರೋಗ್ಯ ಯಥಾಸ್ಥಿತಿಯಲ್ಲಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತು ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವೆಂಟಿಲೇಟರ್ ಅಳವಡಿಸಲಾಗಿದ್ದು, ಅಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಮಂಗಳೂರಿನ ವೆನ್ಲಾಕ್ ನ ಪ್ರಕಟಣೆ ತಿಳಿಸಿದೆ.
Be the first to comment on "ಕೊರೊನಾ ಪಾಸಿಟಿವ್ ಕೇಸ್ ಇಲ್ಲ, 495 ಮಂದಿ ಪರೀಕ್ಷಾ ವರದಿ ಬರಲು ಬಾಕಿ"