ಕೊರೊನಾ ತಡೆಗಟ್ಟಲು ಸರಕಾರ ಈಗ ಕೈಗೊಂಡಿರುವ ಕ್ರಮಗಳು ಗೊತ್ತೇ ಇದೆ. ಇದಕ್ಕೆ ಪೂರಕವಾಗಿ ನಿಮ್ಮ ಅನಿಸಿಕೆ ಏನು? bantwalnews@gmail.com ಈ ಈಮೈಲ್ ವಿಳಾಸಕ್ಕೆ ಬರೆದು ಕಳುಹಿಸಿ. ಉತ್ತಮವಾದದ್ದನ್ನು ಪ್ರಕಟಿಸಲಾಗುವುದು. ಇಲ್ಲಿದೆ ನಿಮ್ಮ ಧ್ವನಿ.
ಜಾಗತಿಕ ಮಹಾಮಾರಿ ಕೊರೊನಾ ವೈರಸನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರಕಾರ , ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಜನತಾ ಕರ್ಪ್ಯೂ , ದೇಶವ್ಯಾಪಿ ಲಾಕ್ ಡೌನ್ ಘೋಷಿಸುವ ಮೂಲಕ ಮಹತ್ವಪೂರ್ಣ ಹೆಜ್ಜೆ ಇರಿಸಿದೆ.
ಆದರೆ ಇದು ಎಷ್ಟೊಂದು ಪರಿಣಾಮಕಾರಿ ಫಲಿತಾಂಶ ನೋಡಬಹುದು ಅನ್ನುವುದರ ಬಗ್ಗೆ ಚಿಂತನೆ ಕೂಡ ಈಗಿಂದಾಗೇ ಮಾಡಬೇಕಾಗುತ್ತದೆ. ಯಾಕೆಂದರೆ ಕೊರೊನಾ ಖಾಯಿಲೆಯ ಬಗ್ಗೆ ಭಯಬಿದ್ದು ಇಂದು ಎಷ್ಟೋ ಜನ ಆಸ್ಪತ್ರೆಗೆ ಹೋಗುವುದಕ್ಕೂ ಹಿಂಜರಿದಿದ್ದಾರೆ. ಅದೆಷ್ಟೋ ಮಂದಿ ನೆಗಡಿ , ತಲೆನೋವು , ಜ್ವರ ಬಂದರೂ ಆಸ್ಪತ್ರೆಗೆ ಹೋಗದೆ ಮನೆಯಲ್ಲೇ ಉಳಿದುಕೊಂಡಿರುತ್ತಾರೆ. ಅದರಲ್ಲಿ ಎಷ್ಟು ಮಂದಿಗೆ ಕೊರೊನಾ ಸೋಂಕು ತಗುಲಿದೆಯೋ ಇಲ್ಲವೋ ಯಾರಿಗೂ ಗೊತ್ತಿರುವುದಿಲ್ಲ. ಆದ್ದರಿಂದ ಸರಕಾರ ಲಾಕ್ ಡೌನ್ ಮಾಡಿರುವ ಈ ಸಮಯದಲ್ಲಿ ಪ್ರತಿ ಪಂಚಾಯತ್ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತರು , ವೈದ್ಯರು ಮತ್ತು ನರ್ಸ್ ಗಳ ಮೂಲಕ ಮನೆ ಮನೆಗೆ ಭೇಟಿ ಮಾಡಿಸಿ ಪರೀಕ್ಷಿಸುವಂತೆ ಮಾಡಬೇಕು.
ಅಲ್ಲದೆ ದೈನಂದಿನ ಆಹಾರ ಪದಾರ್ಥಗಳನ್ನು ಪೂರೈಸುವುದಕ್ಕಾಗಿ ಬೆಳಿಗ್ಗೆ 7 ರಿಂದ 12 ರ ತನಕ ದಿನಸಿ ಅಂಗಡಿಗಳು ತೆರೆದಿಡುವುದು ಕೂಡ ಕೊರೋನಾ ತಡೆಗಟ್ಟುವಲ್ಲಿ ತೊಡಕಾಗುತ್ತಿದೆ. ಆದ್ದರಿಂದ ಸರಕಾರವೇ ಆಯಾ ಪ್ರದೇಶಗಳಲ್ಲಿ ಒಂದೆರಡು ದಿನಸಿ ಅಂಗಡಿಗಳನ್ನು ಗೊತ್ತು ಪಡಿಸಿ ಅವರ ಮೂಲಕ ಪ್ರತಿಯೊಬ್ಬರ ಮನೆಬಾಗಿಲಿಗೆ ಆಹಾರ ಸಾಮಾಗ್ರಿಗಳನ್ನು ಪೂರೈಸುವುದರ ಬಗ್ಗೆ ತುರ್ತು ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಕೊರೋನಾ ಸೋಂಕಿತರು ಅವರಿಗೆ ಗೊತ್ತಿಲ್ಲದೇ ಬೇರೆಯವರಿಗೂ ಪಸರಿಸುವ ಸಾಧ್ಯತೆ ಇದೆ. ಈ ಮೇಲಿನ ಎಲ್ಲಾ ಕ್ರಮಗಳನ್ನು ಕೈಗೊಂಡರೆ ಮಾತ್ರ ಪ್ರಧಾನಿಯವರ ಲಾಕ್ ಡೌನ್ ನಿರ್ದಾರ ಕೊರೋನಾ ನಿರ್ಮೂಲನೆಗೊಳಿಸುವ ಒಂದು ಪರಿಣಾಮಕಾರಿ ಕ್ರಾಂತಿಕಾರಿ ಹೆಜ್ಜೆಯಾಗಿ ಪರಿವರ್ತಿಸಬಹುದು. ಇಲ್ಲಂದ್ರೆ ವರ್ಷಪೂರ್ತಿ ಲಾಕ್ ಡೌನ್ ಮಾಡಿದರೂ ಯಾವುದೇ ಉಪಯೋಗವಾಗದು ಎಂಬುದು ನನ್ನ ಅನಿಸಿಕೆ.
- ಇಕ್ಬಾಲ್
- ಭಾರತೀಯ ಮಾನವ ಹಕ್ಕು ಸಂರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರು , ದ.ಕ. ಜಿಲ್ಲೆ.
Be the first to comment on "ರಿಲ್ಯಾಕ್ಸ್ ಅವಧಿಯಲ್ಲಿ ಓಡಾಟ ನಡೆಸಿದರೆ ಉದ್ದೇಶ ಈಡೇರದು, ಕಟ್ಟುನಿಟ್ಟಿನ ಬಂದ್ ಅಗತ್ಯ"