ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಕೊರೊನಾಗೆ ಸಂಬಂಧಿಸಿ 48 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಲಭಿಸಿದ್ದು, ಇದರಲ್ಲಿ 1 ಪಾಸಿಟಿವ್ ಮತ್ತು 47 ನೆಗೆಟಿವ್ ಎಂದು ಘೋಷಣೆಯಾಗಿದೆ. ಮಂಗಳವಾರ 83 ಮಂದಿಯ ಸ್ಯಾಂಪಲ್ ಕಳುಹಿಸಲಾಗಿದೆ. ಈವರೆಗೆ 1369 ಮಂದಿಯ ಸ್ಯಾಂಪಲ್ ಗಳನ್ನು ಕಳುಹಿಸಲಾಗಿದೆ. 940 ಮಂದಿಯ ಸ್ಯಾಂಪಲ್ ರಿಸಲ್ಟ್ ಬಂದಿದ್ದು, 924 ಮಂದಿಯ ಟೆಸ್ಟ್ ನೆಗೆಟಿವ್ ಬಂದಿತ್ತು. 16 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಅವುಗಳ ಪೈಕಿ 1 ಸಾವು ಸಂಭವಿಸಿದೆ. 12 ಮಂದಿ ಗುಣಮುಖರಾಗಿದ್ದು, 3 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 429 ಮಂದಿ ಗಂಟಲು ದ್ರವ ಮಾದರಿ ಪರೀಕ್ಷೆ ಫಲಿತಾಂಶ ಬರಲು ಬಾಕಿ ಇದೆ. ಪತ್ತೆಯಾದ 16 ಪ್ರಕರಣಗಳಲ್ಲಿ 4 ಬಂಟ್ವಾಳ ತಾಲೂಕಿಗೆ ಸೇರಿದೆ.
ಮಂಗಳವಾರ 21 ಮಂದಿಯನ್ನು ನಿಗಾದಲ್ಲಿ ಇರಿಸಲಾಗಿದೆ. 813 ಮಂದಿ ನಾನಾ ಕಡೆಗಳಲ್ಲಿ ಇರುವ ಫಿವರ್ ಕ್ಲಿನಿಕ್ ಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಮಂಗಳೂರಿನ ಎನ್.ಐ.ಟಿ.ಕೆ.ಯಲ್ಲಿ 39 ಮಂದಿ ಕ್ವಾರಂಟೈನ್ ನಲ್ಲಿದ್ದಾರೆ. ಇ.ಎಸ್.ಐ. ಆಸ್ಪತ್ರೆಯಲ್ಲಿ 10 ಮಂದಿ ಇದ್ದಾರೆ. 6042 ಮಂದಿ ಹೋಂ ಕ್ವಾರಂಟೈನ್ ಮುಗಿಸಿದ್ದಾರೆ. ಇದೀಗ ಹೋಂ ಕ್ವಾರಂಟೈನ್ ನಲ್ಲಿ ಇರುವವರು 31 ಮಂದಿ ಮಾತ್ರ.
ಆರೋಗ್ಯ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತರು ಈವರೆಗೆ ಬಂಟ್ವಾಳದಲ್ಲಿ 22,442, ಬೆಳ್ತಂಗಡಿಯಲ್ಲಿ 19,311, ಮಂಗಳೂರಿನಲ್ಲಿ 66,025, ಪುತ್ತೂರಿನಲ್ಲಿ 38217 ಸೇರಿದಂತೆ ಒಟ್ಟು 1,62,622 ಮನೆಗಳಲ್ಲಿ ಸಮೀಕ್ಷೆ ಪೂರೈಸಿದ್ದಾರೆ.
Be the first to comment on "ದಕ್ಷಿಣ ಕನ್ನಡ: ಇಂದು 83 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆ ರವಾನೆ"