ಕೊರೊನಾ ಹಿನ್ನಲೆಯಲ್ಲಿ ಭಾರತ ಲಾಕ್ ಡೌನ್ ನಿಂದ ತೀವ್ರ ಸಂಕಷ್ಟಕ್ಕೊಳಗಾದ ಆಯ್ದ ಕುಟುಂಬಗಳಿಗೆ V.M.ಬ್ಯಾಟರೀಸ್ ಕದ್ರಿ ಇದರ ಮಾಲಕರಾದ ಪ್ರಶಾಂತ್ ಭಟ್ ಕಡಬ pmjf ಹಾಗೂ ಮಲ್ಲಿಕಟ್ಟೆ ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ವರದಾರಾಜ್ ಬಾಳಿಗ ಇವರು ತಮ್ಮ ವೈಯಕ್ತಿಕ ನೆಲೆಯಲ್ಲಿ ಸುಮಾರು ಹತ್ತು ಸಾವಿರಕ್ಕಿಂತಲೂ ಹೆಚ್ಚಿನ ತರಕಾರಿಗಳನ್ನು ನಗರದ ಹಲವೆಡೆ ಮತ್ತು ಆತ್ಮೀಯರು ಕೊಡಮಾಡುವ ಕಿಟ್ ಗಳಿಗೆ ಮಂಗಳೂರು ತಾಲೂಕಿನ ಅಸೈಗೋಳಿ , ಬಂಟ್ವಾಳ ತಾಲೂಕಿನ ಕುರ್ನಾಡು ಪರಿಸರಕ್ಕೆ ತರಕಾರಿ ಕಿಟ್ ಕೊಟ್ಟು ತನ್ನ ಮಾನವೀಯತೆಯನ್ನು ಮೆರೆದಿದ್ದಾರೆ.
ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿರುವ ಲಯನ್ ಪ್ರಶಾಂತ್ ಭಟ್ ಕಡಬ ಮತ್ತು ವರದರಾಜ ಬಾಳಿಗ ಮಲ್ಲಿಕಟ್ಟೆಯ ಲಯನ್ಸ್ ಕ್ಲಭ್ ನ ಪಧಾದಿಕಾರಿಗಳು ಎಂಬುದು ಗಮನಾರ್ಹ ಅಂಶ, ಇವರು ಹಲವಾರು ಸಮಾಜಮುಖಿ ಸೇವೆಗಳ ಮೂಲಕ ಬಡ ಅಶಕ್ತರಿಗೆ ವೈದ್ಯಕೀಯ ನೆರವಿನಲ್ಲೂ ಮಹತ್ತರವಾದ ಕೆಲಸ ಕಾರ್ಯ ಮಾಡಿದವರು.ಇದೀಗ ತೆರೆಯ ಮೆರೆಯಲ್ಲಿ ನಿಂತು ಯಾವುದೇ ಪ್ರಚಾರ ಬಯಸದೆ ಇಷ್ಟು ದೊಡ್ಡ ಮಟ್ಟದಲ್ಲಿ ಸಂಕಷ್ಟಕ್ಕೀಡಾದವರಿಗೆ ನೆರವಾಗುವುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಮತ್ತು ಇನ್ನೊಬ್ಬರಿಗೆ ಸ್ಫೂರ್ತಿಯಾಗಿದೆ. ಈ ಸಂಧರ್ಭದಲ್ಲಿ ಪತ್ರಕರ್ತ ವಿನಯಕೃಷ್ಣ ಕುರ್ನಾಡು ಮತ್ತು ರಾಜೇಶ್ ಉಪಸ್ಥಿತರಿದ್ದರು
Be the first to comment on "ಕೊರೊನ ಸಂಕಷ್ಟ:ತರಕಾರಿ ವಿತರಣೆ"