ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ (ಏ.20) ಯಾವುದೇ ಕೊರೊನಾ ಪಾಸಿಟಿವ್ ಕೇಸ್ ವರದಿಯಾಗಿಲ್ಲ. ಸೋಮವಾರ ಲಭ್ಯವಾದ 25 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆ ವರದಿಗಳೆಲ್ಲವೂ ನೆಗೆಟಿವ್ ಆಗಿದೆ. ಆದರೆ ಸೋಮವಾರ 255 ಮಂದಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈಗಾಗಲೇ ಕಳುಹಿಸಿದವರದ್ದೂ ಸೇರಿದಂತೆ 394 ಮಂದಿಯ ಪರೀಕ್ಷೆ ಫಲಿತಾಂಶ ಬರಲು ಬಾಕಿ ಇದೆ.
ವಿವರ ಹೀಗಿದೆ.
- ಸೋಮವಾರ ಯಾವುದೇ ಪಾಸಿಟಿವ್ ಕೇಸ್ ಇಲ್ಲ
- ಇಂದು 255 ಮಂದಿಯ ಗಂಟಲು ದ್ರವ ಪರೀಕ್ಷೆ ಲ್ಯಾಬ್ ಗೆ
- ಇಂದು ಲಭ್ಯವಾದ 25 ಮಂದಿಯ ಟೆಸ್ಟ್ ನೆಗೆಟಿವ್
- 11 ಮಂದಿ ನಿಗಾದಲ್ಲಿ
- ಸುರತ್ಕಲ್ ನಲ್ಲಿ 34 ಮಂದಿ ಕ್ವಾರಂಟೈನ್
- ಇದುವರೆಗಿನ ರಿಪೋರ್ಟ್-877 ನೆಗೆಟಿವ್, 15 ಪಾಸಿಟಿವ್, 1 ಸಾವು, 12 ಗುಣಮುಖ
ಬಂಟ್ವಾಳ ತಾಲೂಕಿನ ಕಸ್ಬಾದಲ್ಲಿ ಮೃತಪಟ್ಟ ರೋಗಿ ಮನೆ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದ್ದು, ಅದಕ್ಕೆ ತಾಲೂಕು ತಹಸೀಲ್ದಾರ್ ಅವರನ್ನು ಇನ್ಸಿಡೆಂಟ್ ಕಮಾಂಡರ್ ಆಗಿ ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂದು ರುಪೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Be the first to comment on "ದ.ಕ.ದಲ್ಲಿ 394 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆ ವರದಿ ನಿರೀಕ್ಷೆಯಲ್ಲಿ"