ಬಂಟ್ವಾಳ ತಾಲೂಕಿನ ಮಜಿ ಎಂಬಲ್ಲಿ ಚಿರತೆಯೊಂದು ಸುಮಾರು 6 ಅಡಿ ಆಳದ ಬಾವಿಗೆ ಭಾನುವಾರ ರಾತ್ರಿ ಬಿದ್ದಿದೆ. ಮಜಿ ಮೋನಪ್ಪ ಎಂಬವರ ಜಮೀನಿನಲ್ಲಿರುವ ಬಾವಿ ಇದು.
ರಾತ್ರಿ ಹೊತ್ತಿನಲ್ಲಿ ಬಾವಿ ಕಾಣದೆ ಒಳಗೆ ಬಿದ್ದಿರಬೇಕು ಎಂದು ಅಂದಾಜಿಸಲಾಗಿದ್ದು, ಬಳಿಕ ಸೋಮವಾರ ಅರಣ್ಯ ಇಲಾಖೆ, ಅಗ್ನಿ ಶಾಮಕದಳ ಸಿಬ್ಬಂದಿ ಹಾಗೂ ಪೋಲೀಸರು ಕಾರ್ಯಚರಣೆ ನಡೆಸಿ ಸುರಕ್ಷಿತವಾಗಿ ಮೇಲಕ್ಕೆತ್ತಲಾಯಿತು. ಸುಮಾರು ಎರಡು ವರ್ಷ ಮರಿ ಚಿರತೆ ಇದಾಗಿದೆ ಎಂದು ಪರೀಕ್ಷೆ ನಡೆಸಿದ ವೈಧ್ಯರು ತಿಳಿಸಿದ್ದಾರೆ. ವಲಯ ಅರಣ್ಯಾಧಿಕಾರಿ ಶ್ರೀಧರ್, ಪ್ರೀತಂ, ಜಿತೇಶ್, ಬಾಸ್ಕರ್, ವಿನಯ್, ಬಂಟ್ವಾಳ ಗ್ರಾಮಾಂತರ ಎಸ್.ಐ.ಪ್ರಸನ್ನ, ಟ್ರಾಫಿಕ್ ಎಸ್.ಐ.ರಾಜೇಶ್ ಕೆ.ವಿ.ಸಿಬ್ಬಂದಿ ಜನಾರ್ಧನ, ಕಿರಣ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಗಳು ಕಾರ್ಯಚರಣೆ ನಡೆಸಿದ್ದರು.
Be the first to comment on "ಬಾವಿಗೆ ಬಿದ್ದ ಮರಿಚಿರತೆ ಪಾರು"