ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾಮದಲ್ಲಿ ಚಿರತೆಯೊಂದು ಕಾಟ ನೀಡುತ್ತಿದೆ. ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅರಣ್ಯ ಇಲಾಖೆಯ ಮೊರೆ ಹೋಗಿದ್ದಾರೆ.
ಜಾಹೀರಾತು
ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾಮದ ಮಡಾವು ನಿವಾಸಿ ಕುಸುಮಾ ಶೆಟ್ಟಿ ಅವರ ಮನೆಯ ಅಂಗಳದಿಂದ ಮುಂಜಾನೆ ಸುಮಾರು ಮೂರು ಗಂಟೆಯ ವೇಳೆ ಗೆ ನಾಯಿಯನ್ನು ಚಿರತೆಯೊಂದು ಬೇಟೆಯಾಡಿ. ಎತ್ತಿ ಕೊಂಡು ಹೋಗಿದೆ. ನಾಯಿ ಜೋರಾಗಿ ಬೊಗಳುವುದನ್ನು ಕೇಳಿಸಿಕೊಂಡ ಮನೆಯವರು ಎಚ್ಚರಗೊಂಡು ಹೊರಬಂದು ನೋಡುತ್ತಿದಂತೆ ಚಿರತೆ ನಾಯಿಯನ್ನು ಕೊಂದು ಎತ್ತಿಕೊಂಡು ಹೋಗಿದೆ. ಈ ಬಗ್ಗೆ ಬಂಟ್ವಾಳ ಅರಣ್ಯ ಇಲಾಖೆ ಗೆ ಲಿಖಿತ ವಾಗಿ ದೂರು ಕೂಡಾ ನೀಡಲಾಗಿದ್ದು, ಚಿರತೆ ಹಾವಳಿಯಿಂದ ಮುಕ್ತಿಗೊಳಿಸಲು ಈ ಭಾಗದ ಜನರು ಇಲಾಖೆ ಯ ಮೊರೆ ಹೋಗಿದ್ದಾರೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಬಡಗಕಜೆಕಾರು ಗ್ರಾಮದಲ್ಲಿ ಚಿರತೆ ಕಾಟ?"