ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಮಹಿಳೆಯೊಬ್ಬರು ಕೋವಿಡ್ ಗೆ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಇಡೀ ಬಂಟ್ವಾಳ ಪೇಟೆಯನ್ನು ಬಂದ್ ಮಾಡಲಾಗಿದೆ. ಪೇಟೆಯ ಮಧ್ಯೆ ಯಾರೂ ಮನೆಯಿಂದ ಹೊರಬರುತ್ತಿಲ್ಲ. ಭಾನುವಾರ ರಾತ್ರಿ ಪೇಟೆಯ ಪ್ರಮುಖ ರಸ್ತೆಯನ್ನು ಬ್ಯಾರಿಕೇಡ್ ಮತ್ತು ತಾತ್ಕಾಲಿಕವಾಗಿ ಮಣ್ಣಿನ ಗೋಡೆ ಕಟ್ಟುವ ಮೂಲಕ ಬಂದ್ ಮಾಡಲಾಯಿತು. ಬಂಟ್ವಾಳ ಜಿಲ್ಲಾಡಳಿತ ಸೂಚನೆಯಲ್ಲಿ ಪುರಸಭೆ, ಆರೋಗ್ಯ ಇಲಾಖೆ, ಪೊಲೀಸ್, ತಾಲೂಕಾಡಳಿತ ಸಹಿತ ನಾನಾ ಸರ್ಕಾರಿ ಇಲಾಖೆಯ ಅಧಿಕಾರಿ ಸಿಬ್ಬಂದಿ ನಿಗಾ ಇರಿಸಿದ್ದು, ಸಾರ್ವಜನಿಕರಿಗೆ ಅವಶ್ಯವಿರುವ ವಸ್ತುಗಳನ್ನು ಮನೆಮನೆಗೆ ಒದಗಿಸುವ ವ್ಯವಸ್ಥೆ ಮಾಡಲಿದೆ. ಹೆದ್ದಾರಿಯಲ್ಲಷ್ಟೇ ಅಗತ್ಯವಿರುವ ಅತಿ ಅವಶ್ಯವಿರುವ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಮೃತ ಮಹಿಳೆಯ ಮನೆ ಸುತ್ತಮುತ್ತಲಿನ ವ್ಯಾಪ್ತಿಯನ್ನು ಕಂಟೈನ್ಮೆಂಟ್ ಏರಿಯಾ , ಸೋಂಕಿನ ಮನೆಯಿಂದ ಸುಮಾರು ೩ ಕಿ. ಮೀ ಸುತ್ತಲೂ ಇಂಟೆನ್ಸಿವ್ ಬಫರ್ ಝೋನ್ ಬಿ.ಸಿ.ರೋಡ್ ಸೇರಿದಂತೆ ಸುಮಾರು ಐದಾರು ಕಿ.ಮೀ. ವ್ಯಾಪ್ತಿಯ ಭಾಗ ಬಫರ್ ಝೋನ್ ಎಂದು ಗುರುತಿಸಲಾಗಿದೆ. ಸೋಂಕಿತ ಮಹಿಳೆ ಇದ್ದ ಮನೆಯ ಸುತ್ತಮುತ್ತಲಿನ ಮನೆಗಳವರ ಆರೋಗ್ಯ ತಪಾಸಣೆ ಸಹಿತ ಹಲವು ಕ್ರಮಗಳನ್ನು ಜಿಲ್ಲಾಡಳಿತವು ತಾಲೂಕಾಡಳಿತ ಪುರಸಭೆ ಮತ್ತು ಆರೋಗ್ಯ ಇಲಾಖೆ ಸಹಕಾರದಲ್ಲಿ ಕೈಗೊಳ್ಳಲಿದೆ.
www.bantwalnews.com Editor: Harish Mambady
Be the first to comment on "ಬಂಟ್ವಾಳದಲ್ಲಿ ಸಂಪೂರ್ಣ ನಿರ್ಬಂಧ, ಹೆದ್ದಾರಿಯಲ್ಲಷ್ಟೇ ತುರ್ತು ವಾಹನ ಸಂಚಾರ"