www.bantwalnews.com Editor: Harish Mambady
ಒಂದು ಹಂತಕ್ಕೆ ಮುಗಿಯಿತು ಎಂದುಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಜನರು ಬೆಚ್ಚಿಬೀಳಿಸುವಂತೆ ಕೊರೊನಾ ಆಘಾತ ನೀಡಿದೆ. ಭಾನುವಾರ ಮಹಿಳೆಯೊಬ್ಬರು ಸೋಂಕಿನಿಂದ ಮೃತಪಟ್ಟರೆ, ಮತ್ತೋರ್ವರಿಗೆ ಸೋಂಕು ಇರುವುದು ದೃಢಪಟ್ಟಿದೆ.
ಪೇಶಂಟ್ 325ರ ಸಂಪರ್ಕ ಹೊಂದಿದವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಬಂಟ್ವಾಳದ 50 ವರ್ಷದ ಮಹಿಳೆ ಮೃತಪಟ್ಟಿದ್ದು, ಅವರು ಮೃತಪಟ್ಟ ಬಳಿಕ ಗಂಟಲು ದ್ರವ ಮಾದರಿ ವರದಿ ಬಂದಿದ್ದು, ಕೊರೊನಾ ದೃಢಪಟ್ಟಿದೆ.
ಭಾನುವಾರ ಜಿಲ್ಲಾಧಿಕಾರಿ ನೀಡಿರುವ ಸಾರ್ವಜನಿಕ ಪ್ರಕಟಣೆ ವಿವರ ಹೀಗಿದೆ. ಹೋಂ ಕ್ವಾರಂಟೈನ್ ನಲ್ಲಿ ಇರುವವರು 120. ಹೋಂ ಕ್ವಾರಂಟೈನ್ ಮುಗಿಸಿದವರು 5953. ಒಟ್ಟು ದೃಢಪಟ್ಟ ಪ್ರಕರಣ 15, 1 ಸಾವು, 12 ಗುಣಮುಖ, ಇಬ್ಬರಿಗೆ ಚಿಕಿತ್ಸೆ, ಭಾನುವಾರ 166 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆಗೆ.
Be the first to comment on "ದಕ್ಷಿಣ ಕನ್ನಡ ಜಿಲ್ಲೆಗೆ ಆಘಾತ ನೀಡಿದ ಕೊರೊನಾ"