ಪರೀಕ್ಷೆಗೆಂದು 865 ಮಂದಿಯ ಗಂಟಲು ದ್ರವ ಮಾದರಿ ಕಳುಹಿಸಲಾಗಿದೆ. ಇವುಗಳ ಪೈಕಿ 720 ಮಂದಿಯ ಫಲಿತಾಂಶ ಇದುವರೆಗೆ ಬಂದಿದ್ದು, 707 ನೆಗೆಟಿವ್, 13 ಪಾಸಿಟಿವ್. ಇವರ ಪೈಕಿ 12 ಮಂದಿ ಗುಣಮುಖ, ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ 7 ಮಂದಿಯ ಫಲಿತಾಂಶ ಗೊತ್ತಾಗಿದ್ದು, ಎಲ್ಲವೂ ನೆಗೆಟಿವ್. ಇನ್ನು ಒಟ್ಟು 145 ಮಂದಿಯ ಗಂಟಲು ದ್ರವ ಮಾದರಿಯ ಫಲಿತಾಂಶ ಬರಲು ಬಾಕಿ ಇದೆ.
ಇದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಶನಿವಾರ ಹೊರಡಿಸಿದ ಕೊರೊನಾ ಕುರಿತ ಜಿಲ್ಲೆಯ ಸ್ಥಿತಿಗತಿ ಕುರಿತ ಪ್ರಕಟಣೆ
5813 ಮಂದಿ ಹೋಂ ಕ್ವಾರಂಟೈನ್ ಮುಗಿಸಿದ್ದು ಅವರಲ್ಲಿ ಯಾವುದೇ ರೋಗ ಲಕ್ಷಣಗಳು ಇಲ್ಲ. ಫಿವರ್ ಕ್ಲಿನಿಕ್ಗಳಲ್ಲಿ ಒಟ್ಟು 498 ಮಂದಿ ತಪಾಸಣೆ ನಡೆಸಲಾಗಿದೆ.
ಏ.17ರಂದು ದ.ಕ.ಜಿಲ್ಲೆಯಲ್ಲಿ ಸೋಂಕು ದೃಢಪಟ್ಟಿರುವ ವ್ಯಕ್ತಿ ಮಾರ್ಚ್ 20ರಂದು ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಮಂಗಳೂರಿಗೆ ಭಾರತಿ ಟ್ರಾವೆಲ್ಸ್ ಬಸ್ ನಂ.ಕೆಎ51ಎಡಿ5832ನಲ್ಲಿ ಪ್ರಯಾಣಿಸಿದ್ದು, ಈ ಬಸ್ಸಿನಲ್ಲಿ ಪ್ರಯಾಣಿಸಿದ ಎಲ್ಲ 32 ಮಂದಿಯೂ ತಮ್ಮ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಪರಿಕ್ಷೆ ಮಾಡಿಸಿಕೊಳ್ಳಬೇಕು ಎಂದು ವಿನಂತಿಸಿದ್ದಾರೆ.
CONTANIMENT ZONE: ದ.ಕ. ಜಿಲ್ಲೆಯ 7 ಗ್ರಾಮಗಳನ್ನು containment Zone ಹಾಗೂ Incident Commander ಗಳನ್ನು ನೇಮಿಸಿ ಜಿಲ್ಲಾಧಿಕಾರಿಗಳ ಆದೇಶ – ತುಂಬೆ, ಸಜೀಪನಡು, ಬೆಳ್ತಂಗಡಿಯ ಕರಾಯ, ತೊಕ್ಕೊಟ್ಟು, ಅಜ್ಜಾವರ, ಸಂಪ್ಯ ಮತ್ತು ಉಪ್ಪಿನಂಗಡಿ.
ದ.ಕ.ಜಿಲ್ಲೆಯ ಸಜೀಪನಡು, ತುಂಬೆ ಗ್ರಾಮಗಳು, ಬೆಳ್ತಂಗಡಿಯ ಜನತಾ ಕಾಲೊನಿ-ಕರಯ ಗ್ರಾಮ, ಉಪ್ಪಿನಂಗಡಿ, ಸ್ಮಾರ್ಟ್ ಪ್ಲಾನೆಟ್, ತೊಕ್ಕೊಟ್ಟು, ಪುತ್ತೂರು ತಾಲೂಕಿನ ಸಂಪ್ಯಮನೆ ಮತ್ತು ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮಗಳ ಪ್ರದೇಶವನ್ನು CONTAINMENT ZONE ಎಂದು ಗುರುತಿಸಲಾಗಿದೆ. ಈಗಾಗಲೇ ಇಲ್ಲಿ ಸಂಪೂರ್ಣ ನಿರ್ಬಂಧ ವಿಧಿಸಲಾಗಿದ್ದು, ಜನರ ಆರೋಗ್ಯ, ಇತರೆ ಸೌಲಭ್ಯ ಒದಗಿಸಲು ಹಾಗೂ ನಿರ್ಬಂಧ ನಿಯಮ ಅನುಷ್ಠಾನಗೊಳಿಸಲು ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡಲು ಇನ್ಸಿಡೆಂಟ್ ಕಮಾಂಡರ್ ಗಳ ನೇಮಕಾತಿ ಮಾಡಲಾಗಿದ್ದಾಗಿ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Be the first to comment on "ದಕ್ಷಿಣ ಕನ್ನಡ: ಇವತ್ತು ಯಾವುದೇ ಕೊರೊನಾ ಕೇಸ್ ಇಲ್ಲ"