ಶುಕ್ರವಾರ ಮಧ್ಯಾಹ್ನ ಜಿಲ್ಲಾಧಿಕಾರಿ ಸಿಂಧು ರೂಪೇಶ್ ಪ್ರಕಟಣೆ ಹೊರಡಿಸಿದಂತೆ ಓರ್ವ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟ ವಿಚಾರ ಬಿಟ್ಟರೆ, ಸಂಜೆ ಹೊರಡಿಸಿದ ಪ್ರಕಟಣೆಯ ಪ್ರಕಾರ, ಉಳಿದ ಎಲ್ಲ 12 ಮಂದಿಯೂ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಓರ್ವ ಕೊರೋನಾ ಸೋಂಕಿತನಷ್ಟೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶುಕ್ರವಾರ ಮೂವರು ಕೊರೋನಾ ಸೋಂಕಿತರು ಡಿಸ್ಚಾರ್ಜ್ ಆಗಿದ್ದಾರೆ. 63 ವರ್ಷದ ವೃದ್ದ ಮಹಿಳೆ,52 ವರ್ಷ ಹಾಗೂ 43 ವರ್ಷದ ಇಬ್ಬರು ಪುರುಷರು ಡಿಸ್ಚಾರ್ಜ್ ಆದವರು.
ಇವತ್ತು ಸಂಜೆ ಜಿಲ್ಲಾಧಿಕಾರಿ ಹೊರಡಿಸಿದ ಪ್ರಕಟಣೆಯ ಸಾರಾಂಶ ಹೀಗಿದೆ. ಒಟ್ಟು ಹೋಂ ಕ್ವಾರಂಟೈನ್ ನಲ್ಲಿ ಉಳಿದವರು 588. ಹೋಂ ಕ್ವಾರಂಟೈನ್ ಮುಗಿಸಿದವರು 5485. ಪರೀಕ್ಷೆಗೆ ಸ್ಯಾಂಪಲ್ ಕಳಿಸಿದ್ದು 714. ವರದಿ ಬಂದದ್ದು 713. ನೆಗೆಟಿವ್ – 700, ಪಾಸಿಟಿವ್ -13.
ಶುಕ್ರವಾರ 32 ಮಂದಿಯ ಸ್ಯಾಂಪಲ್ ಕಳುಹಿಸಲಾಗಿದೆ. 90 ಮಂದಿಯ ಪರೀಕ್ಷಾ ವರದಿ ಬಂದಿದ್ದು, 89 ನೆಗೆಟಿವ್, 1 ಪಾಸಿಟಿವ್ ಆಗಿದೆ. 28 ಮಂದಿಯನ್ನು ನಿಗಾದಲ್ಲಿ ಶುಕ್ರವಾರ ಇರಿಸಲಾಗಿದೆ.
Be the first to comment on "ಕೋವಿಡ್ ಕೇಸ್: ದ.ಕ.ದಲ್ಲಿಂದು ಮೂವರು ಡಿಸ್ಚಾರ್ಜ್, ಚಿಕಿತ್ಸೆ ಪಡೆಯುತ್ತಿರುವವರು ಕೇವಲ ಒಬ್ಬರು"