- ತಾಪಂ, ಪುರಸಭೆ ವ್ಯಾಪ್ತಿಯ ಎಲ್ಲ ತರಕಾರಿ, ದಿನಸಿ ಅಂಗಡಿಗಳಿಗೂ ನಿಯಮ ಅನ್ವಯ
ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಬರುವ ದಿನಸಿ ಅಂಗಡಿಗಳಲ್ಲಿ ಮತ್ತು ತರಕಾರಿ ಅಂಗಡಿಗಳಲ್ಲಿ ದಿನಸಿ ಸಾಮಗ್ರಿಗಳಿಗೆ ಮತ್ತು ತರಕಾರಿ ವಸ್ತುಗಳಿಗೆ ನಾನಾ ತರದ ದರಗಳನ್ನು ಸಾರ್ವಜನಿಕರಿಂದ ವಸೂಲು ಮಾಡುವ ಕುರಿತು ದೂರುಗಳು ಬಂದಿವೆ ಎಂದು ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್. ಆರ್. ತಿಳಿಸಿದ್ದು, ಈ ಕುರಿತು ದರಪಟ್ಟಿಯನ್ನು ತರಕಾರಿ ಮತ್ತು ದಿನಸಿ ಅಂಗಡಿಗಳಲ್ಲಿ ಕಡ್ಡಾಯ ಅಳವಡಿಸಲು ಸೂಚಿಸಿದ್ದಾರೆ.
ಈ ಬಗ್ಗೆ ತಾಪಂ ಕಾರ್ಯನಿರ್ವಹಣಾಧಿಕಾರಿ ಮತ್ತು ಬಂಟ್ವಾಳ ಪುರಸಭೆಗೆ ಪತ್ರವನ್ನು ಕಳುಹಿಸಲಾಗಿದ್ದು, ಪಿಡಿಒಗಳ ಮೂಲಕ ಮಾಲೀಕರಿಗೆ ಸೂಚನೆ ನೀಡುವಂತೆ ಕೋರಲಾಗಿದೆ. ದರಪಟ್ಟಿಗಳಲ್ಲಿರುವುದನ್ನು ಬಿಟ್ಟು ಹೆಚ್ಚುವರಿ ದರ ವಸೂಲು ಮಾಡುವುದು ಕಂಡುಬಂದರೆ, ಅಂಥ ಅಂಗಡಿ ಮಾಲೀಕರ ವಿರುದ್ಧ ಸೂಕ್ತ ಕಾನೂನಾತ್ಮಕ ಕ್ರಮ ಕೈಗೊಳ್ಳುವುದಾಗಿ ತಹಸೀಲ್ದಾರ್ ರಶ್ಮಿಎಸ್.ಆರ್. ಎಚ್ಚರಿಸಿದ್ದಾರೆ.
www.bantwalnews.com Editor: Harish Mambady
Be the first to comment on "ತಾಲೂಕಿನ ಎಲ್ಲ ತರಕಾರಿ, ದಿನಸಿ ಅಂಗಡಿಗಳಲ್ಲೂ ದರಪಟ್ಟಿ ಕಡ್ಡಾಯ – ತಹಸೀಲ್ದಾರ್ ಸೂಚನೆ"