- ಅಗತ್ಯವಿದ್ದರೆ ಮಾತ್ರ ಬ್ಯಾಂಕಿನಿಂದ ಹಣ ಪಡೆಯಿರಿ – ಜಿಲ್ಲಾಧಿಕಾರಿ ಮನವಿ
ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ ನಲ್ಲಿ ಜನಧನ ಮಹಿಳಾ ಖಾತೆದಾರರಿಗೆ ಪ್ರತಿ ತಿಂಗಳು ತಲಾ 500 ರೂಗಳಂತೆ 3 ತಿಂಗಳು ಕೇಂದ್ರ ಸರಕಾರ ಜಮಾ ಮಾಡಲಿದ್ದು, ಬ್ಯಾಂಕುಗಳಿಗೆ ಜಮಾ ಆಗಿರುವ ಹಣ ಯಾವುದೇ ಕಾರಣಕ್ಕೂ ಹಿಂಪಡೆಯಲಾಗುವುದಿಲ್ಲ. ಜಮಾ ಆಗಿರುವ ಹಣವು ನಿಮ್ಮ ಖಾತೆಯಲ್ಲಿಯೇ ಇದ್ದು, ಆ ಹಣವನ್ನು ಡ್ರಾ ಮಾಡಿಕೊಳ್ಳಲು ಯಾವುದೇ ಕಾಲಮಿತಿ ಇರುವುದಿಲ್ಲ. ಹಾಗಾಗಿ ಯಾವುದೇ ವದಂತಿಗಳಿಗೆ ಕಿವಿಗೊಡದೆ ನಿಮಗೆ ಅವಶ್ಯಕತೆ ಇದ್ದಲ್ಲಿ ಮಾತ್ರ ಬ್ಯಾಂಕನ್ನು ಸಂಪರ್ಕಿಸಿ, ಹಣ ಪಡೆಯಬಹುದು. ಬ್ಯಾಂಕುಗಳಿಗೆ ಭೇಟಿ ನೀಡಿದ ಸಮಯ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಕಡ್ಡಾಯ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ರೂಪೇಶ್ ಮನವಿ ಮಾಡಿದ್ದಾರೆ.
ಕೇಂದ್ರ ಕಾರ್ಮಿಕ ಇಲಾಖೆ ನಿರ್ದೇಶನದಂತೆ ಜಿಲ್ಲೆ ಕಾರ್ಮಿಕ ಇಲಾಖೆಯು ವಲಸೆ ಕಾರ್ಮಿಕರಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ಕುಳೂರು ಪ್ರದೇಶದಲ್ಲಿ ಈ ದಿನ ಒಂದು ವದಂತಿ ಮೇರೆಗೆ ಜನಜಂಗುಳಿ ಸೇರಿದ್ದು, ಗಮನಕ್ಕೆ ಬಂದಿದೆ. ಕಾರ್ಮಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ ಸಾಮಾಜಿಕ ಅಂತರ ಕಾಪಾಡಿ ಮಾಹಿತಿ ನೀಡಲು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಕೋರಿದ್ದಾರೆ.
Be the first to comment on "ಜನಧನ ಖಾತೆ ಹಣ ವಾಪಸ್ ಹೋಗಲ್ಲ: ವದಂತಿಗಳಿಗೆ ಕಿವಿಗೊಡಬೇಡಿ"