
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ರೂಪೇಶ್ ಬುಧವಾರ ಸಂಜೆ ಹೊರಡಿಸಿದ ಪ್ರಕಟಣೆ ಪ್ರಕಾರ ಕೋವಿಡ್ 19ರ ಇಂದಿನ ವಿವರ ಹೀಗಿದೆ.
ಕೋವಿಡ್ 19ರ ವಿಚಾರವಾಗಿ 15 ಮಂದಿಯನ್ನು ಬುಧವಾರ ನಿಗಾದಲ್ಲಿ ಇರಿಸಲಾಗಿದ್ದು, 148 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆ ವರದಿ ಬರಲು ಬಾಕಿ ಇದೆ. 22 ಮಂದಿಯ ಸ್ಯಾಂಪಲ್ ಗಳನ್ನು ಇಂದು ಪರೀಕ್ಷೆಗೆ ಕಳುಹಿಸಲಾಗಿದೆ. ಬುಧವಾರ 42 ಮಂದಿಯ ಪರೀಕ್ಷಾ ವರದಿ ಬಂದಿದ್ದು, ಎಲ್ಲವೂ ನೆಗೆಟಿವ್ ಇದೆ. ಒಟ್ಟು 4848 ಮಂದಿ ಕ್ಯಾರಂಟೈನ್ ಮುಗಿಸಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ. 1225 ಮಂದಿ ಇನ್ನೂ ಹೋಂ ಕ್ವಾರಂಟೈನ್ ನಲ್ಲಿ ಇದ್ದಾರೆ. ಇದುವರೆಗೆ 12ರಲ್ಲಿ 9 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಈ ಪ್ರಕಾರ ಒಟ್ಟು 3 ಕೋವಿಡ್ ಪಾಸಿಟಿವ್ ಪ್ರಕರಣದ ರೋಗಿಗಳಷ್ಟೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.
www.bantwalnews.com Editor: Harish Mambady



Be the first to comment on "ದ.ಕ.ದಲ್ಲಿ 148 ಮಂದಿಯ ರಿಪೋರ್ಟ್ ನಿರೀಕ್ಷೆಯಲ್ಲಿ"