- 168 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆ ಫಲಿತಾಂಶ ಬಾಕಿ
ದುಬೈನಿಂದ ಆಗಮಿಸಿದ 49 ವರ್ಷದ ವ್ಯಕ್ತಿಯೊಬ್ಬರು ಪುತ್ತೂರಿಗೆ ಆಗಮಿಸಿದ ಸಂದರ್ಭ ಏ.1ರಂದು ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರೀಗ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಕೋವಿಡ್ 19ರ ಹಿನ್ನೆಲೆಯಲ್ಲಿ ದಾಖಲಾದ 12 ಸೋಂಕಿತರ ಪೈಕಿ 9 ಮಂದಿ ಡಿಸ್ಚಾರ್ಜ್ ಆದಂತಾಗಿದೆ.
ಮಂಗಳವಾರ ದೊರಕಿದ 12 ರಿಪೋರ್ಟ್ ಗಳೆಲ್ಲವೂ ನೆಗೆಟಿವ್ ಆಗಿದ್ದು, 21 ಮಂದಿಯನ್ನು ನಿಗಾದಲ್ಲಿ ಇರಿಸಲಾಗಿದೆ. ಹೋಂ ಕ್ವಾರಂಟೈನ್ ನಲ್ಲಿ 1485 ಮಂದಿ ಇದ್ದು, 4588 ಮಂದಿ 28 ದಿನಗಳ ಹೋಂ ಕ್ವಾರಂಟೈನ್ ಮುಗಿಸಿದ್ದಾರೆ. ಒಟ್ಟು 636 ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಕೊಡಲಾಗಿದ್ದು, ಅವರ ಪೈಕಿ 468 ರಿಪೋರ್ಟ್ ಇದುವರೆಗೆ ದೊರಕಿದೆ. 456 ನೆಗೆಟಿವ್ ಬಂದಿರುವುದು ಗಮನಾರ್ಹ.
ಮಂಗಳವಾರ ಕಳುಹಿಸಿದ 156 ಮಂದಿಯ ಗಂಟಲು ದ್ರವ ಮಾದರಿ ಸಹಿತ ಒಟ್ಟು 168 ಮಂದಿಯ ಗಂಟಲು ದ್ರವ ಮಾದರಿಯ ಪರೀಕ್ಷೆ ಬರಲು ಬಾಕಿ ಇದೆ. ಮಂಗಳವಾರ ಕೊರೊನೋ ಸೋಂಕಿತರ ಸಮೀಪವರ್ತಿಗಳ ಮಾದರಿಯನ್ನು ಕಳುಹಿಸಲಾಗಿತ್ತು.
Be the first to comment on "ಕೋವಿಡ್ 19: ದಕ್ಷಿಣ ಕನ್ನಡದಲ್ಲಿ 12ರಲ್ಲಿ ಒಟ್ಟು 9 ಮಂದಿ ಗುಣಮುಖ"