ಕೃಷಿ ಚಟುವಟಿಕೆಯ ನೀರು ಸಂಗ್ರಹದ ಹೊಂಡಕ್ಕೆ ಬಟ್ಟೆ ತೊಳೆಯಲು ಆಗಮಿಸಿದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಬಾಂಡೀಲು ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ನೀರುಪಾಲಾಧವರಿಗಾಗಿ ಶೋಧ
ರಾದುಕಟ್ಟೆ ನಿವಾಸಿ ಅಬ್ದುಲ್ ರಝಾಕ್ (42) ಮೃತ ವ್ಯಕ್ತಿ. ಸಂಜೆ ಆಗಮಿಸಿದ ಇವರು ಬಟ್ಟೆ ತೊಳೆಯಲು ಆಗಮಿಸಿದ್ದು, ಚಾಪೆ ನೀರಿನಲ್ಲಿ ಹೋಯಿತು ಎಂಬ ಕಾರಣಕ್ಕೆ ತರಲು ಮುಂದೆ ಹೋದ ಸಂದರ್ಭ ನೀರುಪಾಲಾಧರು.
ಕೂಡಲೇ ಕಾಶಿಮಠ ಪ್ರತಾಪ, ಉಕ್ಕುಡ ಹರೀಶ್, ಸುರೇಶ್ ಅವರ ತಂಡ ನೀರಿನಲ್ಲಿ ಮುಳುಗಿ ಹುಡುಕುವ ಪ್ರಯತ್ನ ಮಾಡಿದರು. ಕಾಸಿಮ್ ಗೂಡಿನಬಳಿ, ಮೊಹಮ್ಮದ್ ಗೂಡಿನಬಳಿ, ಹಾರೀಸ್ ಗೊಡಿನಬಳಿ, ಸಂಶೀರ್, ಇರ್ಷಾದ್ ಮತ್ತಿತರರ ತಂಡ ಕಾರ್ಯಚರಣೆ ಮುಂದುವರಿಸಿದರು. ವಿಟ್ಲ ಪೋಲೀಸರು, ಪುತ್ತೂರು ಅಗ್ನಿಶಾಮಕದಳದವರು ಸಹಕಾರ ನೀಡಿದರು. ರಾತ್ರಿ ವೇಳೆ ಮೃತದೇಹ ಪತ್ತೆಯಾಯಿತು. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Be the first to comment on "ಬಟ್ಟೆ ತೊಳೆಯಲು ತೆರಳಿದ ವ್ಯಕ್ತಿ ನೀರುಪಾಲು"