ಚಿತ್ರ: ರಾಮ್ ನರೇಶ್ ಮಂಚಿ
ಇಂದಿವನು ಸೂಪರಂತೆ. ಅಂದರೆ ಸೂಪರ್ ಮೂನ್.
ಭೂಮಿಗೆ ಹತ್ತಿರ ಬಂದುಣಿಕಿ ನೋಡುವ ಕಾರಣ ಇವನು ಮಾಮೂಲಿಗಿಂತ ಹೆಚ್ಚು ದೊಡ್ಡದಾಗಿ ಕಾಣಿಸುತ್ತಾನೆ. ಇವತ್ತಿವನನ್ನು ಪಿಂಕ ಮೂನ್ ಅಂತಾನೂ ಕರೀತಾರಂತೆ. ಇವನೆಲ್ಲಿ ಪಿಂಕ್ ಪಿಂಕ್ ಇದಾನೆ, ನಿಂಗೆ ಕಣ್ಣು ಕಾಣ್ಸಲ್ವಾ ಅಂತ ಬೊಬ್ಬೆ ಹೊಡೀಬೇಡಿ. ಕೆಲವು ದೇಶಗಳಲ್ಲಿ ಇಂದಿನಿಂದ ನಂತರ ಒಂದು ಜಾತಿಯ ಪಿಂಕ್ ಹೂಗಳು ಅರಳುವುದರಿಂದ ಇವನಿಗೆ ಆ ಹೆಸರಷ್ಟೇ… ಎಲ್ಲಿವನು ಎಲ್ಲಿವನು ಅಂತ ಹುಡುಕಬೇಕಿಲ್ಲ. ಸುಮ್ಮನೆ ಕುತ್ತಿಗೆ ಎತ್ತರಿಸಿ ಆಕಾಶ ನೋಡಿ. ಈಗಲೂ ಕಾಣಿಸ್ತಾನೆ.
- ಅನಿತಾ ನರೇಶ್ ಮಂಚಿ
ಅಂದ ಹಾಗೆ ಏ.8ರಂದು ಪ್ರಕಾಶಿಸುತ್ತಿರುವ ಚಂದ್ರ ಸೂಪರ್ ಪಿಂಕ್ ಮೂನ್. ಏಪ್ರಿಲ್ ತಿಂಗಳು ಪಿಂಕ್ ಹೂ ಬಿಡುವ ಸಮಯ. ಹೀಗಾಗಿ ಈ ತಿಂಗಳ ಹುಣ್ಣಿಮೆಯಂದು ಪ್ರಕಾಶಿಸುವ ಚಂದ್ರನನ್ನು ಸೂಪರ್ ಪಿಂಕ್ ಮೂನ್ ಎಂದು ಕರೆಯುತ್ತಾರೆ.
Be the first to comment on "ಬಾನಲ್ಲಿ ನೋಡಿರಿ ಸೂಪರ್ ಪಿಂಕ್ ಮೂನ್"