ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನೋ ಸೋಂಕು ತಗಲಿ ಚಿಕಿತ್ಸೆ ಪಡೆಯುತ್ತಿರುವ 12 ಮಂದಿಯ ಪೈಕಿ 4 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ. ಪೇಶಂಟ್ ನಂ.26, 34, 39 ಮತ್ತು 41 ಏಪ್ರಿಲ್ 6ರಂದು ಮನೆಗೆ ತೆರಳಿದ್ದಾರೆ.
ಅವರ ವಿವರ ಹೀಗಿದೆ: 1. ಭಟ್ಕಳ ಮೂಲದ 22 ವರ್ಷದ ಪುರುಷ, 2. ಕಾಸರಗೋಡು ಮೂಲದ 32 ವರ್ಷದ ಪುರುಷ. ದುಬೈನಿಂದ ಬಂದಿದ್ದವರು. 3. ಕಾಸರಗೋಡು ಮೂಲದ 47 ವರ್ಷದ ಪುರುಷ. 4. ಕಾಸರಗೋಡು ಮೂಲದ 24 ವರ್ಷದ ಪುರುಷ. ಈ ನಾಲ್ವರೂ ಗುಣಮುಖರಾಗಿದ್ದು, ಮರುಪರೀಕ್ಷೆಯಲ್ಲೂ ನೆಗೆಟಿವ್ ಬಂದಿದೆ ಎಂದು ದ.ಕ.ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.
ಕೊರೊನಾ ಸೋಂಕು ಶಂಕೆಯಲ್ಲಿ ಭಾನುವಾರ ಕಳುಹಿಸಲಾಗಿದ್ದ ಎಲ್ಲ 21 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆಯಲ್ಲಿ ನೆಗೆಟಿವ್ ರಿಪೋರ್ಟ್ ಬಂದಿದ್ದು, ಯಾರಿಗೂ ಸೋಂಕು ತಗಲಿಲ್ಲ. ಸೋಮವಾರ 10 ಮಂದಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆಂದು ಕಳಿಸಲಾಗಿದೆ.
COVID-19 ರೋಗ ನಿಯಂತ್ರಣಕ್ಕೆ ಸಂಬಂಧಿಸಿ ದ.ಕ.ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ನೀಡಿದ ಪತ್ರಿಕಾ ಪ್ರಕಟಣೆ ಪ್ರಕಾರ, ಇದುವರೆಗೆ 4237 ಮಂದಿ ಹೋಂ ಕ್ವಾರಂಟೈನ್ ನಲ್ಲಿದ್ದಾರೆ. ಇದುವರೆಗೆ 341 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಅವರ ಪೈಕಿ 331 ರಿಪೋರ್ಟ್ ಬಂದಿದೆ. 319 ನೆಗೆಟಿವ್ ಮತ್ತು 12 ಪಾಸಿಟಿವ್ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿದೆ.
Be the first to comment on "ಕೋವಿಡ್ 19: ದ.ಕ.ದಲ್ಲಿ 4 ಸೋಂಕಿತರು ಗುಣಮುಖ, ಆಸ್ಪತ್ರೆಯಿಂದ ಬಿಡುಗಡೆ"