www.bantwalnews.com Editor: Harish Mambady
ಕಾಸರಗೋಡು ಸಿರಿಬಾಗಿಲು ವೆಂಕಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ(ರಿ) – ಕೊರೊನಾ ಕುರಿತು ಸಾಮಾಜಿಕ ಜಾಲತಾಣದಲ್ಲಿ ಯಕ್ಷಜಾಗೃತಿಯನ್ನು ಪ್ರಸ್ತುತಪಡಿಸಿದೆ. ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ ಇದರ ರೂವಾರಿ.
” ಕೊರೊನಾ ಯಕ್ಷ ಜಾಗೃತಿ ‘ ಯಕ್ಷಗಾನ ಮೂಲಕ ಮಾರಕ ರೊಗ “ಕೊರೊನಾ’ ವಿರುದ್ದ ಸಾಮಾಜಿಕ ಜಾಗೃತಿ ಮೂಡಿಸುತ್ತದೆ. ಸಂಪೂರ್ಣ ಸಹಕಾರವನ್ನು ಶ್ರೀ ಗಣೇಶ ಕಲಾವೃಂದ ಪೈವಳಿಕೆ, (ದೇವಕಾನ) ನೀಡಿದೆ. ಪದ್ಯರಚನೆ- ಶ್ರೀಧರ ಡಿ. ಯಸ್., ಪ್ರೊ ಎಂ.ಎ.ಹೆಗಡೆ.
ಸಲಹೆ ಹಾಗು ಮಾರ್ಗದರ್ಶನ- ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎ.ಹೆಗಡೆ. ಸದಸ್ಯ ಯೊಗೀಶ ರಾವ್ ಚಿಗುರುಪಾದೆ
ಪ್ರತಿಫಲಾಪೇಕ್ಷೆ ಇಲ್ಲದೆ , ಸಾಮಾಜಿಕವಾದ ಬದ್ದತೆಯಿಂದ ಯಕ್ಷಗಾನ ಕಲಾ ವಲಯದ ಪ್ರತಿನಿಧಿಗಳಾಗಿ ಉದಾರ ಭಾವದಿಂದ ಭಾಗವಹಿಸಿ ನಮ್ಮ ಪ್ರಯತ್ನಕ್ಕೆ ಕಲಾವಿದರು ಸಹಕರಿಸಿದ್ದಾರೆ ಎಂದು ಮಯ್ಯ ಅವರು ತಿಳಿಸಿದ್ದಾರೆ.
ಹಿಮ್ಮೇಳದಲ್ಲಿ ಭಾಗವತರು- ಸಿರಿಬಾಗಿಲು ರಾಮಕೃಷ್ಣ ಮಯ್ಯ, ಚೆಂಡೆ- ಶಂಕರ ಭಟ್, ನಿಡುವಜ್ಜೆ , ಮದ್ದಳೆ – ಉದಯ ಕಂಬಾರು,
ಚಕ್ರತಾಳ- ಶ್ರೀಮುಖ ಯಸ್.ಆರ್.ಮಯ್ಯ
ಮುಮ್ಮೇಳದಲ್ಲಿ ಕೊರೋನಾ- ರಾಧಾಕೃಷ್ಣ ನಾವಡ ಮಧೂರು, ಧನ್ವಂತರಿ- ವಾಸುದೇವ ರಂಗಾಭಟ್, ಮಧೂರು, ರಾಜೇಂದ್ರ- ಜಯಪ್ರಕಾಶ್ ಶೆಟ್ಟಿ, ಪೆರ್ಮುದೆ, ಮಣಿಭದ್ರ- ಗುರುರಾಜ ಹೊಳ್ಳ ಬಾಯಾರು, ಪತ್ನಿ- ಪ್ರಕಾಶ್ ನಾಯಕ್ ನೀರ್ಚಾಲು , ಮಣಿಕರ್ಣ- ಕಿಶನ್ ಅಗ್ಗಿತ್ತಾಯ ನೆಲ್ಲಿಕಟ್ಟೆ, ಪುರಜನರು- ಕೃಷ್ಣ ಭಟ್ ದೇವಕಾನ, ಶಬರೀಶ ಮಾನ್ಯ, ಕಿರಣ್ ಕುದ್ರೆಕ್ಕೂಡ್ಲು, ವೇಷಭೂಷಣ- ಗಣೇಶ ಕಲಾವೃಂದ ಪೈವಳಿಕೆ, ಚಿತ್ರೀಕರಣ- ವರ್ಣ ಸ್ಟುಡಿಯೊ ನೀರ್ಚಾಲ್ Mob – 9447362210. ಕ್ಯಾಮರಾ ಸಹಕಾರ- ಉದಯ ಕಂಬಾರು, ವೇಣುಗೋಪಾಲ್ , ಶೇಖರ್ ವಾಂತಿಚ್ಚಾಲ್ , ಮಹೇಶ್ ತೇಜಸ್ವಿ, ನೀರ್ಚಾಲ್
ಪ್ರತಿಷ್ಠಾನದ ದೂರವಾಣಿ ಸಂಖ್ಯೆ Mob – 9448344380, 8073740237
Be the first to comment on "ಕೊರೊನಾ ವೈರಸ್ ವಿರುದ್ಧ ಜಾಗೃತಿಗಾಗಿ ಯಕ್ಷಗಾನ – ಕೊರೊನಾಸುರ ವಧೆ"